excite ಇ(ಎ)ಕ್ಸೈಟ್‍
ಸಕರ್ಮಕ ಕ್ರಿಯಾಪದ
  1. (ಭಾವಗಳು, ಬೌದ್ಧಿಕಶಕ್ತಿಗಳು, ಮೊದಲಾದವನ್ನು)
    1. ಪ್ರಚೋದಿಸು; ಪ್ರೇರಿಸು.
    2. ಎಚ್ಚರಗೊಳಿಸು; ಜಾಗ್ರತಗೊಳಿಸು.
  2. (ಕ್ರಿಯೆಯನ್ನು, ಕ್ರಿಯೆ ನಡೆವ ಸ್ಥಿತಿಯನ್ನು) ಉಂಟುಮಾಡು; ಪ್ರಚೋದಿಸು.
  3. (ದೇಹದ ಅವಯವಗಳು ಮೊದಲಾದವುಗಳ ಕ್ರಿಯೆಯನ್ನು) ಪ್ರೇರಿಸು; ಉತ್ತೇಜಕದಿಂದ ಉತ್ತೇಜಿಸು; ಉದ್ದೀಪಿಸು.
  4. (ವ್ಯಕ್ತಿಯನ್ನು) ಕೆರಳಿಸು; ರೇಗಿಸು; ಭಾವೋದ್ವೇಗಗೊಳಿಸು; ಉದ್ರೇಕಿಸು: its only result was to excite the audience ಅದರಿಂದಾದ ಒಂದೇ ಪರಿಣಾಮ ಶ್ರೋತೃಗಳನ್ನು ಕೆರಳಿಸಿದ್ದು.
  5. (ಭೌತವಿಜ್ಞಾನ) ಪ್ರಚೋದಿಸು:
    1. (ಯಾವುದೇ ವಸ್ತುವಿನಲ್ಲಿ) ಕಾಂತತೆಯನ್ನುಂಟುಮಾಡು.
    2. ವಿದ್ಯುತ್ತು ಹರಿಯುವಂತೆ ಮಾಡು.
    3. (ಕಾಯಿಸುವುದು, ತಾಡನ, ಮೊದಲಾದ ಕ್ರಿಯೆಗಳಿಂದ ಪರಮಾಣು, ಇಲೆಕ್ಟ್ರಾನ್‍, ಮೊದಲಾದವುಗಳನ್ನು ) ಹೆಚ್ಚಿನ ಶಕ್ತಿಯ ಮಟ್ಟಕ್ಕೆ ಏರಿಸು.
    4. ರೋಹಿತದ ಉತ್ಸರ್ಜನೆಯನ್ನು ಪ್ರಚೋದಿಸು.
    5. ಒಂದು ವಸ್ತುವು ವಿಕಿರಣವನ್ನು ಹೊರಸೂಸುವಂತೆ ಮಾಡು.
  6. (ಛಾಯಾಚಿತ್ರಣ) (ಫಲಕ ಯಾ ಹಿಲಮನ್ನು) ಸಂವೇದಕಗೊಳಿಸು; ಸೂಕ್ಷ್ಮಗ್ರಾಹಿಯಾಗಿ ಮಾಡು.
ನುಡಿಗಟ್ಟು

don’t excite! ಶಾಂತವಾಗಿರು! ಸಮಾಧಾನವಾಗಿರು! ರೇಗಬೇಡ.