See also 2exchange
1exchange ಇ(ಎ)ಕ್ಸ್‍ಚೇಂಜ್‍
ನಾಮವಾಚಕ
  1. (ಸರಕುಗಳು, ಯುದ್ಧದ ಬಂದಿಗಳು, ಏಟುಗಳು, ಮಾತುಗಳು, ಮೊದಲಾದವುಗಳು) ಅದಲುಬದಲು; ಕೊಟ್ಟು ತೆಗೆದುಕೊಳ್ಳುವುದು; ಕೊಡುಕೊಳೆ; ಬದಲಾಯಿಸುವಿಕೆ; ವಿನಿಮಯ; ಮಾರುವೆ; ಮಾರುಪಡಿ.
  2. (ಸಮ ಬೆಲೆಯ ಮೊತ್ತ ಪಡೆಯಲು ಒಂದೇ ದೇಶದ ಬೇರೆ ರೂಪದ ಯಾ ಅನ್ಯ ದೇಶದ ನಾಣ್ಯಕ್ಕಾಗಿ) ನಾಣ್ಯವಿನಿಮಯ.
  3. ನಾಣ್ಯವಿನಿಮಯ ವ್ಯಾಪಾರ.
  4. (ಮುಖ್ಯವಾಗಿ ಬೇರೆಬೇರೆ ದೇಶಗಳಲ್ಲಿ) ಹುಂಡಿ ವಿನಿಮಯ; ನಗದು ಹಣ ಕೊಡದೆ ಅವರವರ ಸಾಲಗಳನ್ನು ಹುಂಡಿಗಳ ಮೂಲಕ ಹೈಸಲು ಮಾಡಿಕೊಳ್ಳುವ ಪದ್ಧತಿ.
  5. ವಿನಿಮಯ (ಮಾಡಿಕೊಂಡ) ವಸ್ತು.
  6. ವಿನಿಮಯ ಕೆಂದ್ರ; ವ್ಯಾಪಾರಿಗಳು ತಮ್ಮ ವ್ಯವಹಾರ ನಡೆಸಲು ಸೇರುವ ಕಟ್ಟಡ: stock exchange ಸ್ಟಾಕು ವಿನಿಮಯ ಕಟ್ಟೆ; ಪಾಲು ಬಂಡವಾಳ, ಸರ್ಕಾರಿ ಸಾಲಪತ್ರ, ಮೊದಲಾದವುಗಳ ವಿಕ್ರಯದ ಸ್ಥಳ; ಪತ್ರ ವ್ಯಾಪಾರಕಟ್ಟೆ.
  7. ದೂರವಾಣಿ (ವಿನಿಮಯ) ಕೇಂದ್ರ; (ದೂರವಾಣಿಗಳ ನಡುವೆ) ಸಂಬಂಧ ಕಲ್ಪಿಸುವ ದೂರವಾಣಿ ಕಛೇರಿ
  8. ವಿನಿಮಯ; ಸ್ವದೇಶಿ ಹಣ ಕೊಟ್ಟು ಪಡೆದ ವಿದೇಶೀ ಹಣ.
  9. (ಚದುರಂಗ) ವಿನಿಮಯ; ಚದುರಂಗದ ಆಟದಲ್ಲಿ ಒಂದು ಕಾಯಿ ಕಳೆದುಕೊಂಡ ಆಟಗಾರ ಅದಕ್ಕಿಂತ ಹೆಚ್ಚು ಬೆಲೆಯುಳ್ಳ ಕಾಯಿಯನ್ನು (ಮುಖ್ಯವಾಗಿ ಆನೆಯನ್ನು) ಹೊಡೆಯುವುದು.
  10. ವಿನಿಮಯ ದರ:
    1. ವಿದೇಶೀ ನಾಣ್ಯದಲ್ಲಿ ತೆಗೆದುಕೊಂಡ ಹುಂಡಿಯನ್ನು ಕೊಳ್ಳಬಹುದಾದ ದರ.
    2. ಈ ದರಕ್ಕೂ ಗೊತ್ತಾದ ವಿನಿಮಯ ದರಕ್ಕೂ ಇರುವ ವ್ಯತ್ಯಾಸ.
  11. ಉದ್ಯೋಗ ವಿನಿಮಯ ಕೇಂದ್ರ; ನೌಕರಿ ಕೊಡುವವರ ಮತ್ತು ನೌಕರಿ ಕೋರುವವರ ವಿವರಗಳನ್ನು ತಿಳಿಸುವ ಕಚೇರಿ.
  12. ವಾಗ್ವಾದ; ಮುಖ್ಯವಾಗಿ ಮಾತಿನ ಚಕಮಕಿ, ಜಗಳ.
ಪದಗುಚ್ಛ
  1. course of exchange = 1exchange(10).
  2. first, second, third, of exchange ಗುರಿ ತಪ್ಪಬಹುದೆಂಬ ಯಾ ನಿಷ್ಫಲವಾಗಬಹುದೆಂಬ ಶಂಕೆಯಿಂದ ಕೊಡುವ ಒಂದೇ ಹುಂಡಿಯ ಮೊದಲನೆಯ, ಎರಡನೆಯ, ಮೂರನೆಯ ಪ್ರತಿ.
  3. in exchange (ಒಂದಕ್ಕೆ) ಪ್ರತಿಯಾಗಿ; ಬದಲಾಗಿ; ವಿನಿಮಯವಾಗಿ.
  4. par of exchange (ವಿದೇಶೀ) ವಿನಿಮಯ ದರ; ಒಂದು ದೇಶದ ನಾಣ್ಯವ್ಯವಸ್ಥೆಗೂ ಇನ್ನೊಂದರ ನಾಣ್ಯವ್ಯವಸ್ಥೆಗೂ ಸಂಬಂಧ ಕಲ್ಪಿಸುವಾಗ ನಿಷ್ಕರ್ಷಿಸಿದ ವಿನಿಮಯದ ಧಾರಣೆ.
  5. rate of exchange = 1exchange(10).
ನುಡಿಗಟ್ಟು

(fair) exchange is no robbery (ಅನ್ಯಾಯವಾದ ವ್ಯವಹಾರದ ಸಮರ್ಥನೆಗಾಗಿ ಹೇಳುವಾಗ ಹಾಸ್ಯವಾಗಿ) ವಿನಿಮಯ ದರೋಡೆಯಲ್ಲ.

See also 1exchange
2exchange ಇ(ಎ)ಕ್ಸ್‍ಚೇಂಜ್‍
ಸಕರ್ಮಕ ಕ್ರಿಯಾಪದ
  1. ಅದಲುಬದಲು ಮಾಡು; ವಿನಿಮಯ ಮಾಡು; ಒಂದಕ್ಕೆ ಬದಲು ಇನ್ನೊಂದು ವಸ್ತುವನ್ನು ಕೊಡು ಯಾ ಪಡೆ.
  2. (ಏಟುಗಳು, ಮಾತುಗಳು, ನೋಟುಗಳು, ಮೊದಲಾದವನ್ನು) ಪರಸ್ಪರ ಅದಲುಬದಲು ಮಾಡು; ಸಾಟಿ ಮಾಡು.
  3. (ಒಂದು ಪಡೆಯಿಂದ ಯಾ ಹಡಗಿನಿಂದ ಇನ್ನೊಂದಕ್ಕೆ ಬೇರೊಬ್ಬ ಅಧಿಕಾರಿಯೊಡನೆ) ವಿನಿಮಯ ಮಾಡಿಕೊ.
ಅಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ನಾಣ್ಯದ ವಿಷಯದಲ್ಲಿ) ವಿನಿಮಯವಾಗು; ಒಂದು ನಾಣ್ಯಕ್ಕೆ ಬದಲಾಗಿ ಅಂಗೀಕೃತವಾಗು.
  2. (ಇನ್ನೊಬ್ಬನೊಡನೆ ಸ್ಥಾನ ಮೊದಲಾದವುಗಳ) ಅದಲುಬದಲಲ್ಲಿ ಪಾಲುಗೊಳ್ಳು; ವಿನಿಮಯ ಮಾಡಿಕೊ.