excess ಇ(ಎ)ಕ್ಸೆಸ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) ಅತ್ಯಾಚಾರ; ದೌರ್ಜನ್ಯ; ಮರ್ಯಾದೆ ಮೀರಿದ ನಡೆವಳಿಕೆ: the excesses of the police ಪೊಲೀಸರ ದೌರ್ಜನ್ಯಗಳು.
  2. (ತಿನ್ನುವುದರಲ್ಲಿ, ಕುಡಿಯುವುದರಲ್ಲಿ) ಅತಿರೇಕ; ಮಿತಿಯಿಲ್ಲದಿರುವುದು: drink to excess ಮಿತಿಮೀರಿ ಕುಡಿ.
  3. ಹದ್ದು ಮೀರಿದ ನಡತೆ; ಎಲ್ಲೆ ಮೀರಿ ನಡೆಯುವುದು; ಮಿತಿಮೀರಿದ ವರ್ತನೆ.
  4. (ಗೊತ್ತಾದ ಮಟ್ಟ, ಮೊತ್ತ ಯಾ ಪ್ರಮಾಣವನ್ನು) ಮೀರುವುದು.
  5. ಹೆಚ್ಚುವರಿ; ಹೆಚ್ಚಳ; ಆಧಿಕ್ಯ; ಒಂದಕ್ಕಿಂತ ಇನ್ನೊಂದು ಹೆಚ್ಚಾಗಿರುವ ಪ್ರಮಾಣ.
  6. (ಕ್ರೌರ್ಯ ಮೊದಲಾದವುಗಳ ವಿಷಯದಲ್ಲಿ) ಅತಿ; ವಿಪರೀತ; ಮಿತಿಮೀರಿರುವಿಕೆ.
  7. ವಿಪುಲತೆ; ಬಾಹುಳ್ಯ; ಸಮೃದ್ಧಿ; ಹೇರಳವಾಗಿರುವಿಕೆ.
ಪದಗುಚ್ಛ
  1. excess fare (ರೈಲ್ವೆಯಲ್ಲಿ) (ಟಿಕೆಟ್ಟಿನಲ್ಲಿ ನಮೂದಿಸಿರುವುದಕ್ಕಿಂತಲೂ ಮೀರಿದ ದೂರವನ್ನು ಯಾ ಮೀರಿದ ತರಗತಿಯಲ್ಲಿ ಪ್ರಯಾಣ ಮಾಡಿದುದಕ್ಕಾಗಿ ಕೊಡಬೇಕಾಗುವ) ಹೆಚ್ಚು ತೆರ; ಅಧಿಕ ಚಾರ್ಜು.
  2. excess luggage or baggage (ಬಿಟ್ಟಿ ಒಯ್ಯಬಹುದಾದದ್ದಕ್ಕಿಂತ) ಹೆಚ್ಚುವರಿ ಸಾಮಾನು.
  3. excess postage ಹೆಚ್ಚುವರಿ ಹಾಸಲು; ಲಕೋಟೆ ಮೊದಲಾದವುಗಳ ಮೇಲೆ ಹಚ್ಚಿರುವ ಸ್ಟಾಂಪುಗಳು ಸಾಲದೆ ಇರುವಾಗ ಕೊಡಬೇಕಾದ ಹೆಚ್ಚಿನ ಹಣ.
  4. excess profits duty (ಯುದ್ಧದ ಪರಿಸ್ಥಿತಿಯಿಂದ ಬಂದ) ಅತಿಲಾಭದ ಮೇಲಿನ ತೆರಿಗೆ.
  5. excess profits levy = ಪದಗುಚ್ಛ \((4)\).
  6. excess profits tax = ಪದಗುಚ್ಛ \((4)\).
  7. in excess ಅಳತೆಮೀರಿ; ಉಚಿತ ಪ್ರಮಾಣ ಮೀರಿ.
  8. in excess of ಮೀರಿ; ಹೆಚ್ಚಾಗಿ.
  9. to excess ಅಳತೆ ಮೀರುವವರೆಗೂ; ಮಿತಿಮೀರಿದ ಮಟ್ಟಕ್ಕೆ; ಉಚಿತ ಪ್ರಮಾಣ ಮೀರುವವರೆಗೂ.