See also 2exact
1exact ಇ(ಎ)ಗ್‍ಸ್ಯಾಕ್ಟ್‍
ಗುಣವಾಚಕ
  1. (ನಿಯಮಗಳು, ಅಪ್ಪಣೆ, ಮೊದಲಾದವುಗಳ ವಿಷಯದಲ್ಲಿ) ಕರಾರುವಾಕ್ಕಾದ; ನಿಖರ; ನಿಷ್ಕೃಷ್ಟವಾದ; ಖಚಿತವಾದ.
  2. (ಮನುಷ್ಯ, ತೀರ್ಮಾನ, ವರ್ಣನೆ, ವರದಿ, ಉತ್ತರ, ಮೊದಲಾದವುಗಳ ವಿಷಯದಲ್ಲಿ) ಯಥಾರ್ಥವಾದ; ಸಂಪೂರ್ಣವಾಗಿ ಸರಿಯಾದ; ಎಳ್ಳಷ್ಟೂ ವ್ಯತ್ಯಾಸವಿಲ್ಲದ; ಸ್ವಲ್ಪವೂ ತಪ್ಪಿಲ್ಲದ; ಸ್ವಲ್ಪವೂ ಹೆಚ್ಚು ಕಡಮೆಯಿಲ್ಲದ.
See also 1exact
2exact ಇ(ಎ)ಗ್‍ಸ್ಯಾಕ್ಟ್‍
ಸಕರ್ಮಕ ಕ್ರಿಯಾಪದ
  1. (ಹಣ, ರುಸುಮು, ಮೊದಲಾದವುಗಳ ಸಲ್ಲಿಕೆಗಾಗಿ ತಗಾದೆ ಮಾಡಿ ಒಬ್ಬನಿಂದ ಬಲವಂತವಾಗಿ) ಪಡೆ; ಸೆಳೆ; ಕೀಳು; ವಸೂಲು ಮಾಡು: exact payment of debt from (person)(ವ್ಯಕ್ತಿಯಿಂದ) ಸಾಲ ವಸೂಲು ಮಾಡು.
  2. (ಕೆಲಸವನ್ನು ಯಾ ನಡೆವಳಿಯನ್ನು) ಒತ್ತಾಯಪಡಿಸು; ನಿರ್ಬಂಧದಿಂದ ಮಾಡಿಸು; ಒತ್ತಾಯದಿಂದ ಮಾಡಿಸು: exact obedience ವಿಧೇಯತೆಯನ್ನು ಒತ್ತಾಯಿಸಿ ಪಡೆ.
  3. (ಪರಿಸ್ಥಿತಿಗಳ ವಿಷಯದಲ್ಲಿ) ಜರೂರಾಗಿ ಅಗತ್ಯವಾಗಿರು; ಕಡ್ಡಾಯವಾಗಿ ಬೇಕಾಗಿರು: work that exacts great care ಬಹಳ ಎಚ್ಚರ ಅಗತ್ಯವಾಗಿರುವ ಕೆಲಸ.