evolution ಈ(ಎ)ವಲ್ಯೂ(ಲೂ)ಷನ್‍
ನಾಮವಾಚಕ
  1. (ಮೊಗ್ಗು, ಸುರಳಿ, ಮೊದಲಾದವು) ತೆಗೆದುಕೊಳ್ಳುವುದು; ಅರಳುವಿಕೆ; ವಿಕಸನ (ಸಾಮಾನ್ಯವಾಗಿ ರೂಪಕವಾಗಿ).
  2. (ಘಟನೆ ಮೊದಲಾದವುಗಳ) ವಿಕಸನ; ಬೆಳವಣಿಗೆ; ಕ್ರಮವಾಗಿ ಯಾ ಒಂದಾದ ಮೇಲೊಂದರಂತೆ ನಡೆಯುವುದು, ಕಾಣಿಸಿಕೊಳ್ಳುವುದು.
  3. (ಅನಿಲ, ಉಷ್ಣ, ಮೊದಲಾದವುಗಳ) ಸೂಸುವಿಕೆ; ಹೊಮ್ಮುವಿಕೆ; ಹೊರಬೀಳುವುದು.
  4. (ಯಾವುದೇ ವಕ್ರದ ವಿಷಯದಲ್ಲಿ) ಹೊರಗಾಣುವಿಕೆ; ವಿಕಸನ.
  5. (ಗಣಿತ) ಘಾತಮೂಲ ತೆಗೆಯುವುದು, ಲೆಕ್ಕಹಾಕುವುದು.
  6. ವಿಕಾಸ; (ಜೀವಿ, ಸಮಾಜ, ವಿಶ್ವ, ರಚನೆ, ವಾದ, ಮೊದಲಾದವುಗಳ) ಕ್ರಮವಾದ ಬೆಳವಣಿಗೆ.
  7. ವಿಕಾಸ; ವಿಕಸನ; ಜೀವಿಜಾತಿಗಳು ಬೇರೆಬೇರೆಯಾಗಿ ಮತ್ತು ಹೊಸದಾಗಿ ಸೃಷ್ಟಿಯಾಗದೆ, ಹಿಂದಿನ ಜೀವಜಾತಿಗಳಿಂದ ಕ್ರಮೇಣ ಬೆಳೆದು ಕಾಣಿಸಿಕೊಳ್ಳುವುದು.
  8. (ಖಗೋಳಕಾಯಗಳ) ವಿಕಾಸ; ವಿಶ್ವದ್ರವ್ಯವು ಸೇರಿಕೊಂಡು ಆಕಾಶಕಾಯಗಳು ರೂಪುಗೊಳ್ಳುವಿಕೆ.
  9. (ಸೇನಾದಳಗಳ, ಹಡಗುಗಳ) ವ್ಯೂಹರಚನೆಯ ಬದಲಾವಣೆ.
  10. ವರ್ತುಲನ; (ಕುಣಿತ ಮೊದಲಾದವುಗಳ) ಸುತ್ತುತಿರುಗುವ ಒಂದು ಚಲನೆ.
ಪದಗುಚ್ಛ

Theory of Evolution ವಿಕಾಸವಾದ; ಪರಿಣಾಮವಾದ; ಗರ್ಭಧಾರಣೆಯಾದಾಗ ಭ್ರೂಣವು ಹೊಸದಾಗಿ ಸೃಷ್ಟಿಯಾಗುವುದಿಲ್ಲವೆಂದೂ ಮೊದಲಿದ್ದುದೇ ವಿಕಾಸವಾಗುವುದೆಂದೂ ಹೇಳುವ ವಾದ.