evoke ಇವೋಕ್‍
ಸಕರ್ಮಕ ಕ್ರಿಯಾಪದ

(ಸತ್ತವನ ಪ್ರೇತ, ಮನೋಭಾವಗಳು, ನೆನಪುಗಳು, ಶಕ್ತಿಗಳನ್ನು) ಆವಾಹನೆ ಮಾಡು; ಕರೆ; ಅಹ್ವಾನಿಸು; ಎಬ್ಬಿಸು; ಬರಿಸು; ಹೊರತರು; ಎದ್ದುಬರುವಂತೆ ಮಾಡು; ಮೇಲೇಳುವಂತೆ ಮಾಡು: to name the gods is to evoke them ದೇವರುಗಳ ಹೆಸರು ಹೇಳಿದರೆ ಅವರನ್ನು ಆವಾಹನೆ ಮಾಡಿದಂತೆಯೇ. his action evoked displeasure ಅವನ ನಡವಳಿಕೆ ಅಸಂತೋಷವನ್ನು ಪ್ರಚೋದಿಸಿತು. this place evokes memories of happier years ಸುಖದ ದಿನಗಳ ನೆನಪನ್ನು ಈ ಸ್ಥಳವು ಮರುಕಳಿಸುವಂತೆ ಮಾಡುತ್ತದೆ.