See also 2evil  3evil
1evil ಈವಿ(ವ್‍)ಲ್‍
ಗುಣವಾಚಕ
  1. ಕೆಟ್ಟ; ದುಷ್ಟ; ಹೊಲ್ಲ; ಅನೀತಿಯುತ: evil deeds ಕೆಟ್ಟ ಕೆಲಸಗಳು.
  2. ಕೆಡುಕಿನ; ಹಾನಿಕಾರ; ಕೆಡಕು ಮಾಡುವ: evil laws ಕೆಡಕು ಮಾಡುವ ಕಾನೂನುಗಳು.
  3. ದುರ್ಗತಿಯ; ದುರದೃಷ್ಟ, ನೋವು, ಸಂಕಟಗಳಿಂದ ಕೂಡಿದ: an evil hour ಅಶುಭ ಗಳಿಗೆ. he has fallen on evil days ಅವನು ದುರ್ಗತಿಗೆ ಬಿದ್ದಿದ್ದಾನೆ.
  4. ಕೆಟ್ಟ; ಅಸಹ್ಯವನ್ನುಂಟು ಮಾಡುವ: a liquid with an evil smell ದುರ್ವಾಸನೆಯ ದ್ರವ.
ಪದಗುಚ್ಛ
  1. an evil tongue ಕೆಟ್ಟ ಬಾಯಿ; ಕೆಟ್ಟನಾಲಿಗೆ; ದೂರುವ, ನಿಂದಿಸುವ ನಾಲಗೆ.
  2. evil day or hour ದುರ್ದಿನ; ಕೆಟ್ಟಗಳಿಗೆ; ದುರದೃಷ್ಟದ, ಕೆಡುಕಿನ — ದಿನ ಯಾ ಕಾಲ.
  3. evil days ಕೆಟ್ಟಕಾಲ; ದುರದೃಷ್ಟದ ಅವಧಿ.
  4. of evil repute ಕೆಟ್ಟ ಹೆಸರಿನ; ಕುಖ್ಯಾತ; ಅಪಖ್ಯಾತಿಯ.
  5. the Evil One ಸೈತಾನ.
See also 1evil  3evil
2evil ಈವಿ(ವ್‍)ಲ್‍
ನಾಮವಾಚಕ
  1. ಕೇಡು; ಕೆಡಕು; ಕೆಟ್ಟದ್ದು; ಹೊಲ್ಲೆಹ; ದುಷ್ಕೃತ್ಯ: of two evils choose the less ಎರಡು ಕೇಡುಗಳಲ್ಲಿ ಕಡಮೆಯದನ್ನು ಆಯ್ದುಕೊ.
  2. ಪಾಪ; ಅಧರ್ಮ; ದುಷ್ಟತನ: his evil tendency ಅವನ ಪಾಪಪ್ರವೃತ್ತಿ.
  3. ಗಂಡಮಾಲೆ; ರಾಜರು ಮುಟ್ಟಿದರೆ ಗುಣವಾಗುವುದೆಂಬ ನಂಬಿಕೆಯಿದ್ದ ಒಂದು ಗ್ರಂಥಿವ್ಯಾಧಿ.
  4. ಕೆಡಕನ್ನುಂಟುಮಾಡುವಂಥದು; ಕೇಡು ತರುವಂಥದ್ದು; ಹಾನಿಕಾರಕ; ಅನರ್ಥಕಾರಿ; ಅನಿಷ್ಟಕಾರಕ; ಅನಿಷ್ಟ: tobacco is considered by some to be an evil ಕೆಲವರ ಪ್ರಕಾರ ಹೊಗೆಸೊಪ್ಪು ಕೆಟ್ಟದ್ದು.
ಪದಗುಚ್ಛ
  1. Aleppo evil ಕುರುಗಳೇಳುವ ಒಂದು ತರದ ರೋಗ.
  2. King’s evil = 2evil(3).
ನುಡಿಗಟ್ಟು

speak evil of (ಒಬ್ಬನ, ಒಂದರ ವಿಷಯವಾಗಿ) ಕೆಟ್ಟದಾಗಿ ನುಡಿ, ಮಾತನಾಡು.

See also 1evil  2evil
3evil ಈವಿ(ವ್‍)ಲ್‍
ಕ್ರಿಯಾವಿಶೇಷಣ

ಕೆಡುಕಾಗಿ; ಕೆಟ್ಟದಾಗಿ; ಕೆಟ್ಟ ರೀತಿಯಲ್ಲಿ: go evil with one ಒಬ್ಬನಿಗೆ ಕೆಟ್ಟದಾಗು, ಕೆಡುಕಾಗು.