See also 2evidence
1evidence ಇವಿಡನ್ಸ್‍
ನಾಮವಾಚಕ
  1. ಸ್ಪಷ್ಟತೆ; ವ್ಯಕ್ತತೆ; ಗೋಚರತೆ; (ಮುಖ್ಯವಾಗಿ) in evidence ಸ್ಪಷ್ಟವಾಗಿ; ಸುವ್ಯಕ್ತವಾಗಿ; ಕಣ್ಣಿಗೆ ಕಾಣಿಸುವಂತೆ.
  2. (ಗುಣಮಟ್ಟ, ಚಿಕಿತ್ಸೆ, ಮೊದಲಾದವುಗಳ ವಿಷಯದಲ್ಲಿ) ಸೂಚನೆ; ನಿದರ್ಶನ; ಗುರುತು; ಚಿಹ್ನೆ; ಕುರುಹು; ಲಕ್ಷಣ.
  3. (ಮುಖ್ಯವಾಗಿ ಬಹುವಚನದಲ್ಲಿ) (ಯಾವುದೋ ಸಿದ್ಧಾಂತಕ್ಕೆ ಬರಲು ಸಹಾಯಕವಾಗುವ) ಪ್ರಮಾಣ; ಸಂಗತಿ; ವಾಸ್ತವಾಂಶಗಳು.
  4. (ನ್ಯಾಯಶಾಸ್ತ್ರ) (ಹೇಳಿಕೆಯಿಂದ ಯಾ ದಾಖಲೆ ಮೊದಲಾದವುಗಳಿಂದ ವಸ್ತುಸ್ಥಿತಿಯನ್ನು, ಸಂಗತಿಯನ್ನು, ಸ್ಥಾಪಿಸುವ) ರುಜುವಾತು; ಸಾಕ್ಷ್ಯ: call (person) in evidence ಸಾಕ್ಷಿಯಾಗಿ (ವ್ಯಕ್ತಿಯನ್ನು) ಕರೆ.
  5. ಸಾಕ್ಷ್ಯಾಧಾರಗಳು; ಕೋರ್ಟಿನಲ್ಲಿ ಸಾಕ್ಷ್ಯ ಯಾ ಪುರಾವೆಯೆಂದು ಅಂಗೀಕರಿಸಬಹುದಾದ ಹೇಳಿಕೆಗಳು, ರುಜುವಾತುಗಳು, ಮೊದಲಾದವುಗಳು.
ಪದಗುಚ್ಛ
  1. cirumstantial evidence ಸಾಂದರ್ಭಿಕ ಸಾಕ್ಷ್ಯ, ಪುರಾವೆ.
  2. external evidence ಬಾಹ್ಯ ಪ್ರಮಾಣ; ಬಾಹ್ಯ ಸಾಕ್ಷ್ಯಾಧಾರ; ಹೊರಪುರಾವೆ; ಬಾಹ್ಯ ರುಜುವಾತು; ಚರ್ಚಿತ ವಿಷಯದಿಂದ ಆಚೆ ಇರುವ ಆಕರಗಳಿಂದ ಪಡೆದ ಸಾಕ್ಷ್ಯ.
  3. internal evidence ಆಂತರಿಕ ಪ್ರಮಾಣ; ಒಳಪುರಾವೆ; ಚರ್ಚಿತ ವಿಷಯದಲ್ಲಿಯೇ ಅಡಗಿರುವ ರುಜುವಾತು. ಸಾಕ್ಷ್ಯ.
  4. presumptive evidence ಸಂಭಾವ್ಯ ಸಾಕ್ಷ್ಯ.
  5. the Evidences of Christianity ಕ್ರೈಸ್ತಧರ್ಮದ ಆಧಾರಗಳು.
  6. verbal evidence ಬಾಯಿಮಾತಿನ ಸಾಕ್ಷ್ಯ; ಹೇಳಿಕೆ ಪುರಾವೆ.
ನುಡಿಗಟ್ಟು

turn (ಬ್ರಿಟಿಷ್‍ ಪ್ರಯೋಗ) King’s (or Queen’s) (ಅಮೆರಿಕನ್‍ ಪ್ರಯೋಗ) State’s evidence ಸರ್ಕಾರಿ ಸಾಕ್ಷಿಯಾಗು; (ಒಂದು ತಕ್ಸೀರಿನಲ್ಲಿ ಸೇರಿದ್ದವನು) ತನ್ನ ಸಹ ಆಪಾದಿತರಿಗೆ ವಿರೋಧವಾಗಿ ಸಾಕ್ಷ್ಯ ಕೊಡು.

See also 1evidence
2evidence ಇವಿಡನ್ಸ್‍
ಸಕರ್ಮಕ ಕ್ರಿಯಾಪದ
  1. ತೋರಿಸು; ಸೂಚಿಸು.
  2. ಪ್ರಮಾಣವಾಗಿರು; ಸಾಕ್ಷಿಯಾಗಿರು.