See also 2everlasting
1everlasting ಎವರ್‍ಲಾಸ್ಟಿಂಗ್‍
ಗುಣವಾಚಕ
  1. ಶಾಶ್ವತ; ನಿತ್ಯ.
  2. ಬಹುಕಾಲ ಬಾಳುವ; ಚಿರಕಾಲದ; ದೀರ್ಘಕಾಲದ.
  3. ಅತಿದೀರ್ಘಕಾಲ ಬಾಳುವ.
  4. ಸತತವಾದ; ಪದೇಪದೇ ಬರುವ; ಅಡಿಗಡಿಗೆ ಬರುವ; ಬೇಸರಹಿಡಿಸುವಷ್ಟು ಪುನರಾವರ್ತಿಸುವ: he is plauged by everlasting attacks of influenza ಅವನು ಮೇಲಿಂದ ಮೇಲೆ ಎರುಗುವ ಇನ್‍ಹ್ಲುಯೆನ್ಸಾ ರೋಗದಿಂದ ಪೀಡಿತನಾಗಿದ್ದಾನೆ. his everlasting complaints ಸತತವಾದ ಅವನ ಗೋಳಾಟಗಳು.
  5. (ಸಸ್ಯಗಳ ವಿಷಯದಲ್ಲಿ) ಬಾಡದ; ಒಣಗಿದ ಮೇಲೂ ಬಣ್ಣ ಆಕಾರಗಳನ್ನು ಉಳಿಸಿಕೊಳ್ಳುವ.
ಪದಗುಚ್ಛ
  1. everlasting life ಸ್ವರ್ಗಲೋಕದ ಬದುಕು; ಅಮರಲೋಕದ ಜೀವನ.
  2. everlasting pea ಲ್ಯಾತಿರಸ್‍ ಕುಲದ, ಬಣ್ಣಬಣ್ಣದ ಹೂವುಗಳುಳ್ಳ ಒಂದು ಗಿಡ.
See also 1everlasting
2everlasting ಎವರ್‍ಲಾಸ್ಟಿಂಗ್‍
ನಾಮವಾಚಕ
  1. ಅನಂತ ಕಾಲ; ಶಾಶ್ವತಕಾಲ.
  2. ಬಾಡದ ಹೂವು; ಅಮರಪುಷ್ಪ; ಬಾಡಿದ ನಂತರವೂ ತನ್ನ ಬಣ್ಣ, ಆಕಾರಗಳನ್ನು ಉಳಿಸಿಕೊಳ್ಳುವ, ಕಾಗದದಂತಹ ದಳಗಳಿರುವ, ಉದಾಹರಣೆಗೆ ಹೆಲಿಕ್ರಿಸಂ ಕುಲದ, ಒಂದು ಸಂಯುಕ್ತ ಪುಷ್ಪ.
  3. (ಬಹುಕಾಲ ಬಾಳಿಕೆ ಬರುವ) ಉಣ್ಣೆ ಯಾ ಟ್ವಿಲ್‍ಸ್ಯಾಟಿನ್‍ ಬಟ್ಟೆಯಿಂದ ನೇಯ್ದ ವಸ್ತು.
ಪದಗುಚ್ಛ

the Everlasting ಶಾಶ್ವತ ಪುರುಷ; ದೇವರು.