ever ಎವರ್‍
ಕ್ರಿಯಾವಿಶೇಷಣ
  1. ಎಂದಿಗೂ; ಎಂದೂ; ಯಾವಾಗಲೂ; ಎಲ್ಲ ಕಾಲದಲ್ಲೂ.
  2. ಸದಾ; ಸರ್ವದಾ: ever-present ಸದಾ ಇರುವ.
  3. (ನಿಷೇಧಾರ್ಥಕ, ಪ್ರಶ್ನಾರ್ಥಕ, ಸೋಪಾಧಿಕ, ತುಲನಾತ್ಮಕ ವಾಕ್ಯಗಳಲ್ಲಿ) ಯಾವಾಗಲಾದರೂ; ಎಂದಾದರೂ; ಯಾವುದೇ ಕಾಲದಲ್ಲಿ: nothing ever happens in this town ಈ ಪಟ್ಟಣದಲ್ಲಿ ಎಂದೂ ಏನೂ ಆಗುವುದಿಲ್ಲ. did you ever hear such stuff? ನೀನು ಇಂಥ ಪೊಳ್ಳು ಮಾತನ್ನು ಎಂದಾದರೂ ಕೇಳಿದ್ದೆಯಾ? if I ever catch him ಅವನು ಯಾವಾಗಲಾದರೂ ನನ್ನ ಕೈಗೆ ಸಿಕ್ಕಿದರೆ. the best thing I ever heard ನಾನು (ಹಿಂದೆ) ಎಂದೇ ಆಗಲಿ ಕೇಳಿದ ಅತ್ಯುತ್ತಮ ಸುದ್ದಿ. better than ever ಎಂದಿಗಿಂತ ಉತ್ತಮ.
  4. ಕೈಲಾದಷ್ಟು; ಸಾಧ್ಯವಾದಷ್ಟು; ಕೂಡಿದ ಮಟ್ಟಿಗೆ; ತಕ್ಕಮಟ್ಟಿಗೆ: be as quick as ever you can ನಿನ್ನ ಕೈಲಾದಷ್ಟು ಮಟ್ಟಿಗೆ ಚುರುಕಾಗಿರು.
  5. (ಆಡುಮಾತು) ಪ್ರಶ್ನಾರ್ಥಕವನ್ನು ಒತ್ತಿ ಹೇಳುವಾಗ: what ever (or whatever) does he want? ಅವನಿಗೆ ಬೇಕಾಗಿರುವುದಾದರೂ ಏನಂತೆ? who ever (or whoever) can it be? ಅದು ಯಾರಾಗಿರಬಹುದು?
  6. (‘ತಮ’ ಭಾವದ ಗುಣವಾಚಕದೊಂದಿಗೆ ‘ಹಿಂದೆ ಇದ್ದವನು’ ಯಾ ‘ಇದ್ದವರೆಲ್ಲರ ಪೈಕಿ’ ಎನ್ನುವುದಕ್ಕೆ ಅಧ್ಯಾಹಾರವಾಗಿ): the back-benchers were the most docile ever (ಹಿಂದಿದ್ದವರ ಪೈಕಿ) ಅತ್ಯಂತ ಮೆತ್ತನೆಯವರೆಂದರೆ ಹಿಂಬೆಂಚಿಗರು.
ನುಡಿಗಟ್ಟು
  1. did you ever? ನೀನು ಎಂದಾದರೂ ನೋಡಿರುವೆಯಾ? ಕೇಳಿರುವೆಯಾ?
  2. ever after ಅಂದಿನಿಂದ ಮುಂದಕ್ಕೆ; ಅದು ಮೊದಲು; ಅದರಿಂದೀಚೆಗೆ.
  3. ever and again ಪದೇ ಪದೇ; ಆಗಾಗ; ಅಡಿಗಡಿಗೆ; ಮತ್ತೆ ಮತ್ತೆ; ಪುನಃ ಪುನಃ.
  4. ever and anon = (ಪ್ರಾಚೀನ ಪ್ರಯೋಗ) ನುಡಿಗಟ್ಟು \((3)\).
  5. ever more ಯಾವಾಗಲೂ; ಎಂದೆಂದಿಗೂ; ಸದಾ.
  6. ever since ಅಂದಿನಿಂದೀಚೆಗೆ.
  7. ever so ಎಷ್ಟೋ; ಬಹಳ: it is ever so much easier ಅದು ಎಂದಿಗಿಂತ ಎಷ್ಟೋ ಸುಲಭವಾಗಿದೆ.
  8. ever such a (ಅಸಂಸ್ಕೃತ) ತುಂಬ; ಬಹಳ; ಅತ್ಯಂತ: he is ever such a nice man ಅವನು ಬಹಳ ಒಳ್ಳೆಯ ಮನುಷ್ಯ.
  9. ever yours (ಕಾಗದವನ್ನು ಮುಕ್ತಾಯ ಮಾಡುವಾಗ ಕೊನೆಯಲ್ಲಿ) ಎಂದಿಗೂ ನಿನ್ನ; ಸದಾ ನಿನ್ನ.
  10. for ever (and a day)
    1. ಮುಂದೆ ಎಂದೆಂದಿಗೂ, ಸದಾ, ಸರ್ವದಾ; ಸಂತತ.
    2. (ಆಡುಮಾತು) ಬಹಳಕಾಲ; ಚಿರಕಾಲ: the tricolour for ever ತ್ರಿವರ್ಣಧ್ವಜ ಚಿರಕಾಲ ಹಾರಾಡಲಿ.
  11. for ever and ever = ನುಡಿಗಟ್ಟು \((10)\).
  12. for ever more = ನುಡಿಗಟ್ಟು \((5, &, 10)\).
  13. is he ever (ಅಮೆರಿಕನ್‍ ಪ್ರಯೋಗ, ಅಶಿಷ್ಟ) ಅವನು ಬಹಳ: is he ever conceited ಅವನು ಬಹಳ ದುರಹಂಕಾರಿ.
  14. yours ever = ನುಡಿಗಟ್ಟು \((9)\).