event ಇವೆಂಟ್‍
ನಾಮವಾಚಕ
  1. ಸಂದರ್ಭ; ಸಂಭವ; ಸಂಗತಿ; ಪ್ರಸಂಗ; ನಡೆದದ್ದು; ನಡೆಯುವುದು; ಅದದ್ದು: in the event of his death ಅವನು ಸತ್ತ ಪಕ್ಷದಲ್ಲಿ. in the event of his coming ಅವನು ಬರುವ ಸಂದರ್ಭದಲ್ಲಿ.
  2. (ಮುಖ್ಯವಾಗಿ ಪ್ರಮುಖ, ಮಹತ್ವದ, ದೊಡ್ಡ) ಘಟನೆ; ಸಂಗತಿ: it was quite an event ಅದೊಂದು ಪ್ರಮುಖ ಘಟನೆ.
  3. (ತತ್ತ್ವಶಾಸ್ತ್ರ) (ಆಕಸ್ಮಿಕ ಸಂಭವಗಳ ಸಿದ್ಧಾಂತದಲ್ಲಿ) ಒಂದಕ್ಕೊಂದು ಸಂಬಂಧವಿಲ್ಲದಿರುವ ಅನೇಕ ಸಾಧ್ಯ ಘಟನೆಗಳಲ್ಲಿ ಯಾವುದಾದರೂ ಒಂದು.
  4. (ಪಂದ್ಯ ಯಾ ಆಟದಲ್ಲಿ) ಬಾಜಿ ವಿಷಯ; ಪಣದ ಸಂದರ್ಭ; ಯಾವುದಾದರೂ ಘಟನೆ ಆಗುವುದೆಂದು ಹಣ ಒಡ್ಡುವ ಸಂದರ್ಭ, ವಿಷಯ: the young fellows were making an event out of her marriage ಆ ಹುಡುಗರು ಅವಳ ಮದುವೆಯ ವಿಷಯವಾಗಿ ಬಾಜಿ ಕಟ್ಟುತ್ತಿದ್ದರು.
  5. ಪಂದ್ಯದ ಒಂದು ಅಂಶ ಆಟ: the field events, the track events ನೆಗೆತ, ಓಟ ಮುಂತಾದ ಆಟವಿಶೇಷಗಳು.
  6. ಫಲ; ಪರಿಣಾಮ: the event of the war was not happy ಯುದ್ಧದ ಪರಿಣಾಮ ಹಿತವಾಗಲಿಲ್ಲ.
  7. (ಭೌತವಿಜ್ಞಾನ) ಯಾವುದೇ ಪ್ರಕ್ರಿಯೆಯ ಒಂದು ಘಟನೆ, ಉದಾಹರಣೆಗೆ ಒಂದು ಪರಮಾಣುವಿನ ಅಯಾನೀಕರಣ.
ನುಡಿಗಟ್ಟು
  1. at all events ಏನೇ ಸಂಭವಿಸಲಿ; ಏನೇ ಆಗಲಿ; ಏನೇ ನಡೆಯಲಿ.
  2. double event ಜೋಡಿ ಘಟನೆ; (ಮುಖ್ಯವಾಗಿ ಜೂಜಾಟದ ಸಂದರ್ಭದಲ್ಲಿ) ಪಂದ್ಯದ ಎರಡು ಘಟನೆಗಳು ಒಟ್ಟಿಗೆ ಬರುವುದು.
  3. in any event = ನುಡಿಗಟ್ಟು \((1)\).
  4. in either event ಯಾವುದೊಂದು ಸಂಭವಿಸಿದರೂ; ಏನೊಂದು ಆದರೂ.
  5. in the event ಹಾಗಾದಲ್ಲಿ; ಅಂತಾದಲ್ಲಿ; ಆ ಪಕ್ಷ.
  6. wise after the event ಕೆಟ್ಟ ಮೇಲೆ ಬುದ್ಧಿ ಬಂದಿತು.