evanescent ಈ(ಎ)ವನೆಸಂಟ್‍
ಗುಣವಾಚಕ
  1. (ತೋರ್ಕೆ, ನೆನಪು, ಮೊದಲಾದವುಗಳ ವಿಷಯದಲ್ಲಿ) (ಬೇಗ) ಮಾಸುವ; ಮಾಸಿಹೋಗುವ; ಅಳಿಸಿಹೋಗುವ; ಅದೃಶ್ಯವಾಗುವ; ಮಾಯವಾಗುವ.
  2. ಅನಂತ ಸೂಕ್ಷ್ಮ; ಸೊನ್ನೆಗೆ ಅತಿಸಮೀಪಕ್ಕೆ ಬರುವ.
  3. ಕ್ಷಣಿಕವಾದ; ಕ್ಷಣಭಂಗುರವಾದ: evanescent as April dew drops ಏಪ್ರಿಲಿನ ಹಿಮಬಿಂದುಗಳಂತೆ ಕ್ಷಣಿಕವಾದ.
  4. ಹಗುರವಾದ; ನವುರಾದ; ನವಿರಾದ; ಸೂಕ್ಷ್ಮವಾದ: the evanescent brushwork in old English painting ಹಳೆಯ ಇಂಗ್ಲಿಷ್‍ ಚಿತ್ರಕಲೆಯಲ್ಲಿನ ನವಿರಾದ ಕುಂಚದ ಕೆಲಸ.