evade ಇವೇಡ್‍
ಸಕರ್ಮಕ ಕ್ರಿಯಾಪದ
  1. (ಆಕ್ರಮಣ, ಬೆನ್ನಟ್ಟುವಿಕೆ, ಕೃತ್ರಿಮ, ವಿರೋಧಿ, ಏಟು, ಪ್ರತಿಬಂಧಕ, ಮೊದಲಾದವುಗಳಿಂದ) ತಪ್ಪಿಸಿಕೊ; (ಇವುಗಳಿಗೆ) ಸಿಕ್ಕದಿರು.
  2. (ಕರ್ತವ್ಯ ಮೊದಲಾದವನ್ನು ಮಾಡದೆ, ಪ್ರಶ್ನೆಗೆ ಉತ್ತರಕೊಡದೆ, ಕೊಡಬೇಕಾದ ತೆರಿಗೆ ಕೊಡದೆ, ವಾದ ಮೊದಲಾದವಕ್ಕೆ ಸಗ್ಗದೆ) ತಪ್ಪಿಸಿಕೊ; ನುಣುಚಿಕೊ; ಜಾರಿಕೊ.
  3. (ಕಾನೂನು ಮೊದಲಾದವನ್ನು ಅಕ್ಷರಶಃ ಅನುಸರಿಸುವಂತೆ ನಟಿಸಿ) ಉದ್ದೇಶಭಂಗ ಮಾಡು; (ನಿಜವಾದ ಉದ್ದೇಶವನ್ನು) ನಿರರ್ಥಕವಾಗಿಸು; ನಿಷ್ಫಲಗೊಳಿಸು: to evade the law ಕಾನೂನನ್ನು ನಿಷ್ಫಲಗೊಳಿಸು; ಕಾನೂನಿನ ಕಣ್ಣು ತಪ್ಪಿಸು.
  4. (ವಸ್ತುಗಳು, ಶಬ್ದಗಳು, ವಿಚಾರ, ಭಾವನೆಗಳು, ಮೊದಲಾದವುಗಳ) ಹಿಡಿತಕ್ಕೆ ಸಿಕ್ಕದಿರು; ಕೈತಪ್ಪಿಸಿಕೊ: a word that evades definition ವಿವರಣೆಗೆ ಸಿಕ್ಕದ ಪದ; ವಿವರಿಸಲು ಕಷ್ಟವಾದ ಪದ.