euphony ಯೂಹನಿ
ನಾಮವಾಚಕ
  1. ಇಂಚರ; ಮಧುರ ಧ್ವನಿ; ಇಂಪಾದ, ಇನಿದಾದ — ದನಿ.
  2. (ಸಾಮಾನ್ಯವಾಗಿ ಪದಗಳು, ಪದಸರಣಿ, ಮೊದಲಾದವುಗಳ) ಸುಸ್ವನ; ಸುಸ್ವರ; ನಾದಮಾಧುರ್ಯ; ಶ್ರುತಿಮಧುರತೆ.
  3. ಉಚ್ಚಾರಣಾಸೌಕರ್ಯ; ಸುಖೋಚ್ಚಾರಣೆ; ಸುಲಭೋಚ್ಚಾರಣೆ; ಸುಲಭೋಚ್ಚಾರಣೆಗಾಗಿ ಮಾಡಲೆಳಸುವ ಸ್ವರವ್ಯತ್ಯಾಸ.