eulogy ಯೂಲಜಿ
ನಾಮವಾಚಕ
  1. (ಒಬ್ಬನ, ಒಂದನ್ನು ಕುರಿತ) ಪ್ರಶಂಸಾ — ಭಾಷಣ, ಲೇಖನ; ಸ್ತೋತ್ರ ಮಾಡುವ, ಪ್ರಶಂಸಿಸುವ — ಭಾಷಣ, ಬರಹ: pronounce his eulogy ಅವನ ವಿಷಯವಾಗಿ ಸ್ತೋತ್ರಪಾಠಮಾಡು.
  2. (ಅಮೆರಿಕನ್‍ ಪ್ರಯೋಗ) ಸ್ಮಾರಕ ಭಾಷಣ; ಮೃತನ ಪ್ರಶಂಸೆ, ಗುಣಗಾನ; ಅಂತ್ಯಸಂಸ್ಕಾರದ ಸಮಯದಲ್ಲಿ ಮೃತನ ಗುಣಗಾನ ಮಾಡುವ ಭಾಷಣ.
  3. ಹೊಗಳಿಕೆ; ಪ್ರಶಂಸೆ; ಸ್ತೋತ್ರ; ಶ್ಲಾಘನೆ; ಗುಣಗಾನ.