etiquette ಎಟಿಕೆಟ್‍
ನಾಮವಾಚಕ
  1. ಮರ್ಯಾದೆ; ಸಮಾಜ ಮರ್ಯಾದೆ; ಸಮಯಾಚಾರ; ಶಿಷ್ಟಾಚಾರ; ಲೋಕಾಚಾರ; ಸದಾಚಾರ; ಸಭ್ಯಾಚಾರ; ಶಿಷ್ಟ ಸಮಾಜದಲ್ಲಿ ಯಾ ಸಭ್ಯರ ನಡುವೆ ವ್ಯಕ್ತಿಯು ನಡೆದುಕೊಳ್ಳಬೇಕಾದ ನಡವಳಿಕೆಯ ಸಾಂಪ್ರದಾಯಿಕ ನಿಯಮಗಳು, ರೀತಿನೀತಿಗಳು: rules of etiquette ಶಿಷ್ಟಾಚಾರಸಂಹಿತೆ; ನಡವಳಿಕೆಯ ರೀತಿನೀತಿಗಳು.
  2. ಆಸ್ಥಾನ ಮರ್ಯಾದೆ; ರಾಜಸಭಾ ಮರ್ಯಾದೆ; ರಾಜಾಸ್ಥಾನದ ಸಂಪ್ರದಾಯಗಳು; ರಾಜಸಭೆಯ ನಡೆವಳಿಗಳು.
  3. ವೃತ್ತಿಮರ್ಯಾದೆ; ವೃತ್ತಿಧರ್ಮ; ವೃತ್ತಿ ಯಾ ಉದ್ಯೋಗಗಳಲ್ಲಿ ನಿರತನಾಗಿರುವವರು ತಮ್ಮ ಸಹವರ್ತಿಗಳ, ಸಹೋದ್ಯೋಗಿಗಳ ಹಿತಗಳ ಹಾಗೂ ತಮ್ಮ ವೃತ್ತಿಯ ಯಾ ಉದ್ಯೋಗದ ಮರ್ಯಾದೆ ಕಾಯುವ ವಿಷಯವಾಗಿ ಅನುಸರಿಸಬೇಕಾದ ನಡವಳಿಕೆಗಳು: medical etiquette ವೈದ್ಯವೃತ್ತಿಯ ಮರ್ಯಾದೆ. legal etiquette ನ್ಯಾಯವೃತ್ತಿಯ ಯಾ ವಕೀಲವೃತ್ತಿಯ ಮರ್ಯಾದೆ.