ethics ಎತಿಕ್ಸ್‍
ನಾಮವಾಚಕ
  1. (ಏಕವಚನ ಮತ್ತು ಬಹುವಚನವಾಗಿ ಸಹ ಪ್ರಯೋಗ).
    1. ನೀತಿಶಾಸ್ತ್ರ: ethics is a branch of philosophy ನೀತಿಶಾಸ್ತ್ರ ತತ್ತ್ವಶಾಸ್ತ್ರದ ಒಂದು ವಿಭಾಗ.
    2. ನೀತಿಸೂತ್ರಗಳು; ನೀತಿನಿಯಮಗಳು.
    3. ಆಚಾರಸೂತ್ರಗಳು; ನಡವಳಿಕೆ ನಿಯಮಗಳು.
    4. ನೀತಿಶಾಸ್ತ್ರದ (ಇಡೀ) ಕ್ಷೇತ್ರ.
  2. (ಬಹುವಚನದಲ್ಲಿ) ನೈತಿಕತೆ; ನೀತಿವಂತಿಕೆ; ನೀತಿಯುಕ್ತತೆ; ನೈತಿಕವಾಗಿ ಸರಿಯಾಗಿರುವುದು: the ethics of the stand he took are questionable ಅವನು ತಳೆದ ನಿಲುವಿನ ನೈತಿಕತೆ ಪ್ರಶ್ನಾರ್ಹವಾದುದು.