ether ಈತರ್‍
ನಾಮವಾಚಕ
  1. ನಿರ್ಮಲ ಆಕಾಶ; ಮೋಡಗಳಿಂದಾಚೆಯ ಪ್ರದೇಶ.
  2. (ಭೌತವಿಜ್ಞಾನ) ಈಥರು; (ಸಾಪೇಕ್ಷತಾವಾದ ಬರುವುದಕ್ಕೆ ಮುಂಚೆ, ಭೌತವಿಜ್ಞಾನದ ಪ್ರಕಾರ ಭಾವಿಸಲಾಗಿದ್ದ) ವಿಶ್ವದ ಎಲ್ಲೆಡೆಯೂ ಹರಡಿಕೊಂಡಿರುವ, ಸಂಪೂರ್ಣ ಅವಿಚ್ಛಿನ್ನತೆ, ಹೆಚ್ಚಾದ ಸ್ಥಿತಿಸ್ಥಾಪಕತೆ, ಮೊದಲಾದ ಅಸಾಮಾನ್ಯ ಗುಣಗಳಿರುವ, ವಿದ್ಯುತ್ಕಾಂತ ಅಲೆಗಳಿಗೆ ಮಾಧ್ಯಮವಾಗಿರುವ, ಒಂದು ಕಾಲ್ಪನಿಕ ಪದಾರ್ಥ.
  3. ಡೈಈಥೈಲ್‍ ಈಥರು; ಈಥೈಲ್‍ ಆಲ್ಕಹಾಲಿನ ಮೇಲೆ ಸಲೂರಿಕಾಮ್ಲದ ವರ್ತನೆಯಿಂದ ತಯಾರಿಸುವ, ಹಗುರವಾದ, ಶಸ್ತ್ರಕ್ರಿಯೆಯಲ್ಲಿ ನಿಶ್ಚೇಷ್ಟಕವಾಗಿ ಬಳಸುವ, ಆವಿಶೀಲ ನಿರ್ವರ್ಣದ್ರವ, ${\rm C}_2{\rm H}_5-{\rm O}-{\rm C}_2{\rm H}_5$.
  4. (ರಸಾಯನವಿಜ್ಞಾನ) ಈಥರು; ಸಾಮಾನ್ಯವಾಗಿ ಹೈಡ್ರೋಕಾರ್ಬನ್‍ಗೆ ಸೇರಿದ ಕಾರ್ಬನ್‍ ಪರಮಾಣುಗಳು ಆಕ್ಸಿಜನ್‍ ಪರಮಾಣುವಿನ ಎರಡು ಕಡೆಯೂ ತಗುಲಿಕೊಂಡಿರುವ ಯಾವುದೇ ಸಂಯುಕ್ತ.
  5. (ಆಡುಮಾತು) ರೇಡಿಯೋ.