eternal ಇ(ಈ)ಟರ್ನ್‍ಲ್‍
ಗುಣವಾಚಕ
  1. ಎಂದೆಂದಿಗೂ ಇರುವ; ಚಿರವಾದ; ಸನಾತನ; ಚಿರಂತನ; ಶಾಶ್ವತ; ನಿತ್ಯ; ಅನಂತ: eternal life ಶಾಶ್ವತ ಬದುಕು. eternal punishment ಶಾಶ್ವತ ಶಿಕ್ಷೆ.
  2. (ಆಡುಮಾತು) ನಿರಂತರ; ಸತತ; ಸಂತತ; ಅವಿಚ್ಛಿನ್ನ; ಎಡೆಬಿಡದ: these eternal bickerings ಈ ಎಡೆಬಿಡದ ಜಗಳಗಳು, ಘರ್ಷಣೆಗಳು.
  3. ಪದೇಪದೇ ಸಂಭವಿಸುವ; ಅಡಿಗಡಿಗೆ ಆಗುವ.
  4. ಅಪರಿವರ್ತನೀಯ; ಬದಲಾಯಿಸದ; ವ್ಯತ್ಯಾಸವಾಗದ.
ಪದಗುಚ್ಛ
  1. Eternal City ರೋಮ್‍ ನಗರ.
  2. the Eternal ಶಾಶ್ವತಪುರುಷ; ದೇವರು.
ನುಡಿಗಟ್ಟು

eternal triangle ಸನಾತನ ತ್ರಿಕೋಣ; ಚಿರತ್ರಿಕೋಣ ಸಮಸ್ಯೆ; ಎಂದೆಂದಿನಿಂದಲೂ ಇರುವ ಮೂರರ ಸಮಸ್ಯೆ; ಎರಡು ಗಂಡು ಒಂದು ಹೆಣ್ಣು ಯಾ ಎರಡು ಹೆಣ್ಣು ಒಂದು ಗಂಡು — ಹೀಗೆ ಮೂವರನ್ನೊಳಗೊಂಡ ಪ್ರಣಯ ಸನ್ನಿವೇಶ, ಸಮಸ್ಯೆ.