estate ಇ(ಎ)ಸ್ಟೇಟ್‍
ನಾಮವಾಚಕ
  1. ರಾಜಕೀಯ ಸಂಸ್ಥೆಯ ಅಂಗವಾಗಿದ್ದು ರಾಜ್ಯಾಧಿಕಾರದಲ್ಲಿ ಭಾಗವಹಿಸುವ ಜನತೆಯ ವರ್ಗ, ತರಗತಿ, ವ್ಯವಸ್ಥೆ.
  2. ಸ್ಥಿರಾಸ್ತಿ; ಭೂಮಿಕಾಣಿ.
  3. (ಒಬ್ಬನ ಒಟ್ಟು) ಲೇಣೆದೇಣೆಗಳು; ಆಸ್ತಿಪಾಸ್ತಿಗಳು.
  4. (ಪ್ರಾಚೀನ ಪ್ರಯೋಗ) ಸ್ಥಿತಿ; ಅವಸ್ಥೆ; ಇರವು: holy estate of matrimony ಪವಿತ್ರವಾದ ವೈವಾಹಿಕ ಸ್ಥಿತಿ.
  5. = estate car.
  6. ಎಸ್ಟೇಟು; ರಬ್ಬರ್‍, ಟೀ, ದ್ರಾಕ್ಷಿ, ಮೊದಲಾದವು ಬೆಳೆಯುವ ಭೂಮಿ, ತೋಟ, ಮೊದಲಾದವು.
ಪದಗುಚ್ಛ
  1. fourth estate (ಹಾಸ್ಯ ಪ್ರಯೋಗ) ವೃತ್ತಪತ್ರಿಕಾ ಲೋಕ; ವೃತ್ತಪತ್ರಿಕೆಗಳು.
  2. housing estate ವಸತಿಪ್ರದೇಶ; ಖಾಸಗಿಯಾಗಿ ಯಾ ಸಾರ್ವಜನಿಕ ಸಂಸ್ಥೆಯಿಂದ ಮನೆಗಳನ್ನು ಕಟ್ಟುವ ಯಾ ಕಟ್ಟಿರುವ ಪ್ರದೇಶ.
  3. industrial estate ಕೈಗಾರಿಕಾ ಪ್ರದೇಶ; ಕೈಗಾರಿಕಾ ಎಸ್ಟೇಟು; ಕೈಗಾರಿಕೆಗಳ ಸ್ಥಾಪನೆಗಾಗಿ ಯಾ ಅಭಿವೃದ್ಧಿಗಾಗಿ ಮೀಸಲಿಟ್ಟ ಪ್ರದೇಶ.
  4. personal estate ಚರಾಸ್ತಿ.
  5. real estate ಸ್ಥಿರಾಸ್ತಿ.
  6. the Three Estates (of the Realm in England) ಇಂಗ್ಲಂಡಿನ ಪ್ರಭುತ್ರಯ; ಧಾರ್ಮಿಕ ಪ್ರಭುಗಳು; ಲೌಕಿಕ ಪ್ರಭುಗಳು; ಜನಸಾಮಾನ್ಯರು.
  7. third estate (ಮುಖ್ಯವಾಗಿ) ಹ್ರಾನ್ಸಿನ ಮಹಾಕ್ರಾಂತಿಯ ಪೂರ್ವದ ಮಧ್ಯಮ ವರ್ಗ.