establishment ಇ(ಎ)ಸ್ಟಾಬ್ಲಿಷ್‍ಮಂಟ್‍
ನಾಮವಾಚಕ
  1. ಸ್ಥಾಪಿಸುವುದು; ಸ್ಥಾಪನೆ; ಸಂಸ್ಥಾಪನೆ; ಪ್ರತಿಷ್ಠಾಪನೆ.
  2. (ಒಂದು ಉದ್ದೇಶಕ್ಕಾಗಿ ನಿಯಮಿಸಿಕೊಂಡಿರುವ, ಭೂಸೇನೆ, ನೌಕಾಸೇನೆ, ನಾಗರಿಕ ಅಧಿಕಾರವರ್ಗ , ಮೊದಲಾದ ವ್ಯವಸ್ಥಿತ) ಸಿಬ್ಬಂದಿ; ಜನತಂಡ.
  3. (ಮನೆ, ವಾಣಿಜ್ಯಸಂಸ್ಥೆ, ಮೊದಲಾದವುಗಳ) ಸಿಬ್ಬಂದಿ; ಸೇವಕವರ್ಗ, ಪೀಠೋಪಕರಣ, ಸರಕು, ಮೊದಲಾದವು.
  4. ಪ್ರತಿಷ್ಠಾನ; ಸಾರ್ವಜನಿಕ ಸಂಸ್ಥೆ.
  5. ವ್ಯಾಪಾರ ಸಂಸ್ಥೆ.
  6. ಮನೆ; ಸಂಸಾರ.
  7. (ಬ್ರಿಟಿಷ್‍ ಪ್ರಯೋಗ) ರೂಢವ್ಯವಸ್ಥೆ; ಸ್ಥಿರ ವ್ಯವಸ್ಥೆ; ಅಧಿಕಾರರೂಢವರ್ಗ; ಪ್ರಭಾವಿವರ್ಗ; ಸಮಾಜದಲ್ಲಿ ಅಧಿಕಾರವನ್ನು ಯಾ ಪ್ರಭಾವವನ್ನು ಹೊಂದಿದ್ದು ಸಾಮಾನ್ಯವಾಗಿ ಬದಲಾವಣೆಗಳನ್ನು ಹೊಂದಿದ್ದು ಸಾಮಾನ್ಯವಾಗಿ ಬದಲಾವಣೆಗಳನ್ನು ವಿರೋಧಿಸುವ ಗುಂಪು, ವರ್ಗ.
ಪದಗುಚ್ಛ
  1. peace establishment ಶಾಂತಿಕಾಲದ (ಕಡಮೆ ಮಾಡಲಾದ) ಸೈನ್ಯ ಸಿಬ್ಬಂದಿ.
  2. separate establishment (ಉಪಪತ್ನಿಯುಳ್ಳವನ) ಪ್ರತ್ಯೇಕ ಸಂಸಾರ.
  3. the Establishment (ಬ್ರಿಟಿಷ್‍ ಪ್ರಯೋಗ) = establishment(7).
  4. war establishment ಯುದ್ಧಕಾಲದ (ಹೆಚ್ಚಿಸಲಾದ) ಸೈನ್ಯ ಸಿಬ್ಬಂದಿ.