establish ಇ(ಎ)ಸ್ಟಾಬ್ಲಿಷ್‍
ಸಕರ್ಮಕ ಕ್ರಿಯಾಪದ
  1. (ಸರ್ಕಾರ, ವ್ಯಾಪಾರಸಂಸ್ಥೆ, ಸ್ಥಾನ, ಮೊದಲಾದವನ್ನು) ಸ್ಥಿರವಾಗಿರುವಂತೆ ಸ್ಥಾಪಿಸು; ಹುಟ್ಟುಹಾಕು.
  2. (ಅಧಿಕಾರ ಮೊದಲಾದವುಗಳಲ್ಲಿ) ಸ್ಥಾಪಿಸು; ನಿಲ್ಲಿಸು; ನಿಲ್ಲು; ನೆಲಸು; ನೆಲೆಗೊಳಿಸು.
  3. (ಪದ್ಧತಿ, ರೂಡಿ, ನಂಬಿಕೆ, ಮೊದಲಾದವನ್ನು) ಸ್ಥಿರಪಡಿಸು; ಅಂಗೀಕೃತವಾಗುವಂತೆ ಮಾಡು; ಊರ್ಜಿತಗೊಳಿಸು; ಸ್ವೀಕೃತವಾಗಿಸು.
  4. (ಒಂದು ವಿಷಯ, ಸಂಗತಿ, ಸತ್ಯಾಂಶ, ಮೊದಲಾದವನ್ನು) ಪ್ರಮಾಣೀಕರಿಸು; ದೃಢಪಡಿಸು; ಸ್ಥಿರೀಕರಿಸು; ನಿಸ್ಸಂದೇಹವಾಗಿ ರುಜುವಾತು ಪಡಿಸು, ಸತ್ಯವೆಂದು ತೋರಿಸು, ಸಿದ್ಧಾಂತಪಡಿಸು: to establish the facts ವಾಸ್ತವಾಂಶಗಳನ್ನು ದೃಢಪಡಿಸಲು.
  5. (ಚರ್ಚನ್ನು, ಮತಧರ್ಮವನ್ನು) ಕಾನೂನುರೀತ್ಯಾ ರಾಷ್ಟ್ರೀಯವನ್ನಾಗಿಸು.
  6. (ಇಸ್ಪೀಟು) ಒಂದು ರಂಗಿನ ಎಲ್ಲಾ ಎಲೆಗಳನ್ನೂ ಹತೋಟಿಗೆ ತೆಗೆದುಕೊಂಡು ಮುಂದಿನ ಪಟ್ಟುಗಳನ್ನು ಗೆಲ್ಲುವಂತೆ ಆಡು.
  7. (ನೌಕರ ಮೊದಲಾದವರನ್ನು) ಕಾಯಂ ಹುದ್ದೆಗೆ ನೇಮಕ ಮಾಡು.