essence ಎಸನ್ಸ್‍
ನಾಮವಾಚಕ
  1. (ಆಧ್ಯಾತ್ಮಿಕ ಯಾ ಅಭೌತಿಕ) ಇರುವಿಕೆ; ಇರವು; ಅಸ್ತಿತ್ವ.
  2. ಸತ್‍; ಪರಮಸತ್ತ್ವ; ಮೂಲತತ್ತ್ವ; ಇಂದ್ರಿಯಗೋಚರ ವಿಷಯಗಳ ಹಿಂದೆ ಅಡಗಿರುವ ಸತ್ಯ.
  3. ಸಾರ; ಸತ್ತ್ವ; ಒಂದು ವಸ್ತುವಿನ ಸಾರಸರ್ವಸ್ವ.
  4. ಮೂಲಗುಣ; ನೈಜ ಸ್ವಭಾವ: is the essence of morality right intention? ಸದುದ್ದೇಶವು ನೀತಿಯ ಮೂಲಗುಣವೇ?
  5. ವೈಶಿಷ್ಟ್ಯ; ಜೀವಾಳ; ಇರಲೇಬೇಕಾದ ಗುಣ ಯಾ ಅಂಶ; ಅತ್ಯಾವಶ್ಯಕ ಗುಣ ಯಾ ಅಂಶ: what is the peculiar essence of the man? ಅವನ ವಿಶೇಷವಾದ ಜೀವಾಳವೇನು?
  6. (ಬಟ್ಟಿ ಇಳಿಸುವುದು ಮೊದಲಾದವುಗಳಿಂದ ಬಂದ) ಸಾರ; ಸಾರಾಂಶ; ತಿರುಳು (ರೂಪಕವಾಗಿ ಸಹ): freedom is the very essence of democracy ಸ್ವಾತಂತ್ರ್ಯವೇ ಪ್ರಜಾಪ್ರಭುತ್ವದ ತಿರುಳು.
  7. ಸುಗಂಧ; ಸುವಾಸನೆ; ಪರಿಮಳ; ಕಂಪು; ಆಮೋದ; ಮುಖ್ಯವಾಗಿ ಮದ್ಯಸಾರ ಯಾ ಆಲ್ಕಹಾಲ್‍ ಸೇರಿಸಿದ ಬಾಷ್ಪಶೀಲ ವಸ್ತುಗಳ ದ್ರಾವಣ.
ನುಡಿಗಟ್ಟು
  1. in essence ಮೂಲಭೂತವಾಗಿ.
  2. of the essence ಅವಶ್ಯವಾದ; ಅಗತ್ಯವಾದ; ಕಡೆಗಣಿಸಲಾಗದ; ಅನಿವಾರ್ಯವಾದ.