espousal ಇ(ಎ)ಸ್ಪೌಸಲ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) (ಸಾಮಾನ್ಯವಾಗಿ ಬಹುವಚನದಲ್ಲಿ) ಮದುವೆ; ವಿವಾಹ; ಲಗ್ನ ಯಾ ನಿಶ್ಚಿತಾರ್ಥ: the espousal of the son to a neighbour’s daughter ಪಕ್ಕದ ಮನೆಯವನ ಮಗಳೊಡನೆ ಮಗನ ಮದುವೆ ನಿಶ್ಚಿತಾರ್ಥ.
  2. (ರೂಪಕವಾಗಿ) (ಒಂದು ಧ್ಯೇಯ ಮೊದಲಾದವುಗಳ)
    1. ಸಮರ್ಥನೆ; ಬೆಂಬಲ: his whole-hearted espousal of Indain independence ಭಾರತದ ಸ್ವಾತಂತ್ರ್ಯಕ್ಕೆ ಅವನ ಹೃತ್ಪೂರ್ವಕ ಬೆಂಬಲ.
    2. ಅಂಗೀಕಾರ; ಅನುಮೋದನೆ.