esoteric ಈ(ಎ)ಸಟೆರಿಕ್‍
ಗುಣವಾಚಕ
  1. (ಮತತತ್ತ್ವ, ಸಿದ್ಧಾಂತ, ಮೊದಲಾದವುಗಳ ವಿಷಯದಲ್ಲಿ) ಅಧಿಕಾರಿಗೆ, ಅಧಿಕೃತನಿಗೆ ಯಾ ದೀಕ್ಷೆ ಪಡೆದವನಿಗೆ ಮಾತ್ರ ಉದ್ದೇಶಿಸಿದ: esoteric religion ಅಧಿಕೃತರಿಗೆ ಮಾತ್ರ ಪ್ರವೇಶವುಳ್ಳ ಮತ.
  2. (ಶಿಷ್ಯರ ವಿಷಯದಲ್ಲಿ) ಪ್ರವೇಶ ಪಡೆದ; ಅಧಿಕೃತ; ಪ್ರವಿಷ್ಟ; ದೀಕ್ಷೆ ಪಡೆದ; ದೀಕ್ಷಿತ; ಉಪದಿಷ್ಟ.
  3. ಗೂಢ; ಗೋಪ್ಯ; ರಹಸ್ಯ; ಗುಟ್ಟಾದ; ಅಂತಸ್ಥವಾದ.
  4. ಸಾಮಾನ್ಯರಿಗೆ ಅರ್ಥವಾಗದ; ದುರವಗಾಹ; ಗಹನ; ದುರ್ಬೋಧ; ಕ್ಲಿಷ್ಟವಾದ; ಗೂಢಾರ್ಥದ; ರಹಸ್ಯಾರ್ಥದ: esoteric poetry ಗೂಢಾರ್ಥ ಕಾವ್ಯ.
  5. ಅಲ್ಪವ್ಯಾಪ್ತಿಯುಳ್ಳ; ಸೀಮಿತ ವ್ಯಾಪ್ತಿಯ; ಕೆಲವರಿಗೇ ಸೀಮಿತವಾದ; ಸೀಮಿತಾಸಕ್ತಿಯ; ಕೆಲವೇ ಮಂದಿಗೆ ಆಸಕ್ತಿ ಹುಟ್ಟಿಸುವಂಥ: the arctic exploration was an esoteric pursuit ಆರ್ಕ್‍ಟಿಕ್‍ ಶೋಧನೆ ಕೆಲವೇ ಮಂದಿಯಲ್ಲಿ ಆಸಕ್ತಿ ಹುಟ್ಟಿಸುವಂಥ ಉದ್ಯಮವಾಗಿತ್ತು.