erupt ಇರಪ್ಟ್‍
ಸಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) ಫಕ್ಕನೆ — ಚೆಲ್ಲು, ಉಗುಳು, ಕಾರು; ಹೊರಕ್ಕೆ — ಎಸೆ, ಹಾಕು, ಚಿಮ್ಮು: he erupted angry words ಅವನು ಕೋಪದ ಮಾತುಗಳನ್ನು ಕಾರಿದ.

ಅಕರ್ಮಕ ಕ್ರಿಯಾಪದ
  1. (ಹಲ್ಲಿನ ವಿಷಯದಲ್ಲಿ ಒಸಡು ಒಡೆದು) ಮೂಡು; ಹುಟ್ಟು; ಮೊಳೆ.
  2. (ಜ್ವಾಲಾಮುಖಿಯ ವಿಷಯದಲ್ಲಿ, ಬಂಡೆ, ಲಾವಾರಸ, ಮೊದಲಾದವನ್ನು) ಹೊರಚಿಮ್ಮು; ಕಾರು; ಸ್ಫೋಟಿಸು; ಉಗುಳು.
  3. (ರೋಗಶಾಸ್ತ್ರ) (ಚರ್ಮದ ಮೇಲೆ ರೋಗ ಇತ್ಯಾದಿ) ಫಕ್ಕನೆ ಕಾಣಿಸಿಕೊ; ಉಕ್ಕು ; ಗುಳ್ಳೆಗಳಾಗಿ ಹರಡಿಕೊ; ಹೊರಸೂಸು.
  4. (ರೂಪಕವಾಗಿ) (ಒಳಗೆ ಅದುಮಿಟ್ಟುಕೊಂಡ ವ್ಯಗ್ರ ಭಾವನೆ ಮೊದಲಾದವು) ಹೊರ ಚಿಮ್ಮು; ಒಡೆದು ಚಿಮ್ಮು; ಸ್ಫೋಟಿಸು: words of anger erupted from him ಕೋಪದ ಮಾತುಗಳು ಅವನ ಬಾಯಿಂದ ಹೊರಚಿಮ್ಮಿದವು.