error ಎರರ್‍
ನಾಮವಾಚಕ
  1. ತಪ್ಪು; ದೋಷ; ಸ್ಖಾಲಿತ್ಯ: make or commit an error ತಪ್ಪು ಮಾಡು. clerical error ಗುಮಾಸ್ತರು ಮಾಡಿದ ಬರಹದ ಕೈತಪ್ಪು.
  2. ತಪ್ಪುಗ್ರಹಿಕೆ; ತಪ್ಪುಕಲ್ಪನೆ; ತಪ್ಪು ತಿಳಿವಳಿಕೆ; ತಪ್ಪು ಅಭಿಪ್ರಾಯ ತಳೆಯುವುದು ಯಾ ತಳೆದಿರುವುದು: error of judegement ವಿವೇಚನೆಯ ದೋಷ; ವಿವೇಚನೆಯಲ್ಲಿನ ತಪ್ಪು; ಅವಿವೇಕದಿಂದಾದ ತಪ್ಪು. realise the error of one’s ways ತನ್ನ ನಡವಳಿಕೆಯ ತಪ್ಪನ್ನು ತಿಳಿದುಕೊ, ಅರಿ.
  3. ದಾರಿ ತಪ್ಪಿ ಹೋಗುವುದು; ಮಾರ್ಗ ತಪ್ಪುವುದು; ಮಾರ್ಗಚ್ಯುತಿ; ಮಾರ್ಗಸ್ಖಲನ.
  4. ತಪ್ಪು ಅಭಿಪ್ರಾಯ; ದೋಷಪೂರಿತ ಅಭಿಪ್ರಾಯ. (ನ್ಯಾಯಶಾಸ್ತ್ರ) ತಪ್ಪುನಿರ್ಣಯ; ಸಾಕ್ಷ್ಯ ನ್ಯಾಯಾಲಯದ ನಿರ್ಣಯದಲ್ಲಿ ಸಂಭವಿಸಿರುವ ವಾಸ್ತವಿಕ ಸಂಗತಿ ಯಾ ಕಾನೂನುವಿಧಾನ ಕುರಿತ ತಪ್ಪು, ತಪ್ಪಿತ.
  5. (ಗಣಿತ) ಸರಿಯಾದ, ನಿಖರವಾದ, ದೋಷಪರಿಮಾಣ; ಫಲಿತಾಂಶದ ವ್ಯತ್ಯಾಸ; ಸರಿಯಾದ ಯಾ ನಿಖರವಾದ ಫಲಿತಾಂಶದಿಂದ ಎಷ್ಟು ವ್ಯತ್ಯಾಸವಾಗಿದೆಯೋ ಆ ಮೊತ್ತ.
ಪದಗುಚ್ಛ
  1. error of a planet ಗ್ರಹಸ್ಥಾನಚ್ಯುತಿ; ಗ್ರಹದೋಷ; ಗ್ರಹಚ್ಯುತಿ; ಲೆಕ್ಕಾಚಾರದ ಪ್ರಕಾರ ಗ್ರಹ ಇರಬೇಕಾದ ಸ್ಥಾನಕ್ಕೂ ಅದು ನಿಜವಾಗಿ ಕಂಡುಬಂದ ಸ್ಥಾನಕ್ಕೂ ಇರುವ ವ್ಯತ್ಯಾಸ.
  2. in error
    1. ತಪ್ಪಾದ.
    2. ತಪ್ಪಾಗಿ; ತಪ್ಪಿನಿಂದ; ತಪ್ಪು ತಿಳಿವಳಿಕೆಯಿಂದ.
  3. writ of error (ನ್ಯಾಯಶಾಸ್ತ್ರ) ದೋಷಪರಿಹಾರ ಪತ್ರ; ತಪ್ಪುತಿದ್ದಿಕೆ ಪತ್ರ; ತೀರ್ಪಿನಲ್ಲಿ ತಪ್ಪಿದೆ ಎಂಬ ಕಾರಣ ತೀರ್ಪು ಬದಲಾಯಿಸಲು ಕೋರಿ ಕೋರ್ಟಿನಿಂದ ಪಡೆದ ಆಜ್ಞಾ ಪತ್ರ.