errand ಎರಂಡ್‍
ನಾಮವಾಚಕ
  1. (ಸುದ್ದಿ ಒಯ್ಯುವುದು, ಸಾಮಾನು ತಲುಪಿಸುವುದು, ಮೊದಲಾದವಕ್ಕಾಗಿ ವ್ಯಕ್ತಿ ಕೈಗೊಳ್ಳುವ ಯಾ ವ್ಯಕ್ತಿಯನ್ನು ಕೈಗೊಳ್ಳುವಂತೆ ಮಾಡುವ) ಸ್ವಲ್ಪದೂರದ ಪ್ರಯಾಣ; ಅಲ್ಪ ಪ್ರಯಾಣ.
  2. ಗುರಿ; ಉದ್ದೇಶ.
  3. ದೌತ್ಯ; ದೂತನಿಗೆ ಯಾ ಸಮಾಚಾರ ಒಯ್ಯುವವನಿಗೆ ವಹಿಸಿದ ವಿಶೇಷ ಕಾರ್ಯ.
ಪದಗುಚ್ಛ
  1. errand of mercy ಶಾಂತಿಯಾತ್ರೆ; ಅಶಾಂತಿ, ಸಂಕಟ, ಮೊದಲಾದವನ್ನು ನಿವಾರಿಸಲು ಕೈಗೊಳ್ಳುವ ಪ್ರಯಾಣ.
  2. go on errands ಯಾ run errands
    1. ವಹಿಸಿದ ಕೆಲಸಕ್ಕಾಗಿ ಹೋಗು.
    2. ಸಮಾಚಾರ ತೆಗೆದುಕೊಂಡು ಹೋಗು.