ermine ಅರ್ಮಿನ್‍
ನಾಮವಾಚಕ
  1. ಅರ್ಮಿನ್‍; (ಬೇಸಗೆಯಲ್ಲಿ ಕಂದು ಬಣ್ಣಕ್ಕೆ ತಿರುಗಿ ಚಳಿಗಾಲದಲ್ಲಿ ಬೆಳ್ಳಗಿರುವ, ಬಾಲದ ತುದಿ ಮಾತ್ರ ಸದಾ ಕಪ್ಪಾಗಿರುವ) ಮಸ್ಟೆಲ ಅರ್ಮಿನಿಯ ಕುಲಕ್ಕೆ ಸೇರಿದ, ತುಪ್ಪುಳು ಚರ್ಮದ, ಮುಂಗುಸಿ ಜಾತಿಯ, ಮಾಂಸಾಹಾರಿ ಪ್ರಾಣಿ. Figure: ermine-1
  2. (ನ್ಯಾಯಾಧೀಶರ ಮತ್ತು ವರಿಷ್ಠವರ್ಗದವರ ಅಧಿಕಾರದ ಕುರುಹಾದ ನಿಲುವಂಗಿಗಳಲ್ಲಿ ಬಳಸುವ) ಅರ್ಮಿನ್ನಿನ ಬಿಳಿ ತುಪ್ಪುಳು ಚರ್ಮ.
  3. ಗೌರವ ಹಾಗೂ ಪರಿಶುದ್ಧತೆಯ ಸಂಕೇತ.
  4. (ವಂಶಲಾಂಛನ ವಿದ್ಯೆ) ಅರ್ಮಿನ್‍; ಕಪ್ಪು ಚುಕ್ಕೆಗಳಿರುವ ಬಿಳಿ ತುಪ್ಪುಳು ಚರ್ಮ.