erase ಇರೇಸ್‍
ಸಕರ್ಮಕ ಕ್ರಿಯಾಪದ
  1. ಅಳಿಸಿಹಾಕು; ಉಜ್ಜಿಹಾಕು; ಒರಸಿಹಾಕು; ತೊಡೆದುಹಾಕು.
  2. (ರೂಪಕವಾಗಿ) (ಮನಸ್ಸಿನಿಂದ ಯಾ ನೆನಪಿನಿಂದ) ಅಳಿಸಿಹಾಕು; ತೊಡೆದುಹಾಕಿಬಿಡು; ಕುರುಹೇ ಇಲ್ಲದಂತೆ ನಾಶಮಾಡಿಬಿಡು.
  3. (ಕಾಂತಟೇಪು ಮೊದಲಾದವುಗಳಿಂದ ಧ್ವನಿಮುದ್ರಿಸಿದ ಭಾಗವನ್ನು) ಅಳಿಸು; ತೊಡೆದುಹಾಕು.