era ಇಅರ
ನಾಮವಾಚಕ
  1. ಶಕ; ಒಂದು ನಿರ್ದಿಷ್ಟ ಕಾಲದಿಂದ ಆರಂಭಿಸುವ ಕಾಲಾನುಕ್ರಮ ಗಣನಾಪದ್ಧತಿ: Chiristian era ಕ್ರಿಸ್ತಶಕ.
  2. ಚಾರಿತ್ರಿಕ ಯುಗ; ಚರಿತ್ರೆಯ ಯಾವುದಾದರೂ ನಿರ್ದಿಷ್ಟ ಕಾಲ, ಯುಗ, ಅವಧಿ.
  3. ಶಕಾರಂಭ; ಯುಗಾರಂಭ; ಶಕಾರಂಭದ ಯಾ ಬೇರಾವುದಾದರೂ ಯುಗದ ಯಾ ಅವಧಿಯ — ಆರಂಭದ ದಿನ.
  4. (ಭೂವಿಜ್ಞಾನ) ಕಲ್ಪ; ಯುಗ; ಭೂಮಿಯ ಭೂವೈಜ್ಞಾನಿಕ ಚರಿತ್ರೆಯ ಐದು ಪ್ರಧಾನ ವಿಭಾಗಗಳಲ್ಲಿ ಒಂದು.
ERA
ಸಂಕ್ಷಿಪ್ತ

(ಅಮೆರಿಕನ್‍ ಪ್ರಯೋಗ) Equal Rights Amendment.