See also 2equivalent
1equivalent ಇಕ್ವಿವಲಂಟ್‍
ಗುಣವಾಚಕ
  1. ಸಮಾನ; (ಯಾವುದೇ ಒಂದಕ್ಕೆ) ಸಮಬೆಲೆಯುಳ್ಳ; ಸಮ ವೇಗದ, ತೀವ್ರತೆಯ: a sum equivalent to Rs. 100 in Indian currency ಭಾರತೀಯ ಹಣದಲ್ಲಿ ನೂರು ರೂಪಾಯಿಗೆ ಸಮಾನ ಬೆಲೆಯ ಹಣ.
  2. (ಪದಗಳ ವಿಷಯದಲ್ಲಿ) ಸಮಾನಾರ್ಥಕ; ಸಮಾನ ಅರ್ಥವುಳ್ಳ; ಒಂದೇ ಅರ್ಥವುಳ್ಳ: substitute a term equivalent with it but more familiar ಅದಕ್ಕೆ ಸಮಾನ ಅರ್ಥವುಳ್ಳ, ಆದರೆ ಹೆಚ್ಚು ಬಳಕೆಯಲ್ಲಿರುವ, ಮತ್ತೊಂದು ಪದವನ್ನು ಪ್ರತಿಯಾಗಿ ಕೊಡು.
  3. (ರಸಾಯನವಿಜ್ಞಾನ) ಸಮಾನ; ರಾಸಾಯನಿಕ ಸಂಯೋಗಸಾಮರ್ಥ್ಯ ಸಮವಾಗಿರುವ: equivalent quantities of two elements ಸಮಾನ ಪರಿಮಾಣದಲ್ಲಿರುವ ಎರಡು ಧಾತುಗಳು.
  4. ಸಮನಾದ; ತದೇಕವಾದ; ಒಂದೇ ಆದ; ಅಷ್ಟೇ ಆದ; ಪರಿಣಾಮದಲ್ಲಿ ಯಾ ಫಲತಃ ಒಂದೇ ಆದ: his silence is equivalent to a confession of guilt ಅವನ ಮೌನ ತಪ್ಪು ಒಪ್ಪಿಕೊಂಡುದಕ್ಕೆ ಸಮವಾಗಿದೆ.
  5. ಸಮಾನ; ಸಂವಾದಿಯಾಗಿರುವ; ತಾಳೆಬೀಳುವ; ಜವಾಬಾಗಿರುವ: in some ways their prime minister is equivalent to our president ಕೆಲವು ಅಂಶಗಳಲ್ಲಿ ಅವರ ಪ್ರಧಾನಮಂತ್ರಿ ನಮ್ಮ ರಾಷ್ಟ್ರಪತಿಗೆ ಸಮಾನವಾಗಿದ್ದಾರೆ.
See also 1equivalent
2equivalent ಇಕ್ವಿವಲಂಟ್‍
ನಾಮವಾಚಕ

ಸಮಾನ — ವಸ್ತು, ಪದ, ಪರಿಮಾಣ, ಮೊದಲಾದವು.