equity ಎಕ್ವಿಟಿ
ನಾಮವಾಚಕ
  1. ನೀತಿ; ಧರ್ಮ; ನ್ಯಾಯ.
  2. ಧರ್ಮನ್ಯಾಯ; ಕಾನೂನಿನಲ್ಲಿ ತಪ್ಪಿರುವುದನ್ನು ತಿದ್ದಿಕೊಂಡು, ಬಿಟ್ಟುಹೋಗಿರುವುದನ್ನು ಸೇರಿಸಿಕೊಂಡು, ನಡೆಸುವ ನ್ಯಾಯ.
  3. ವಿಶೇಷ ನ್ಯಾಯ; ರೂಢಿಯಲ್ಲಿರುವ ಮತ್ತು ಕಾನೂನುಸಮ್ಮತವಾದ ನ್ಯಾಯದ ಜೊತೆಗೆ ಅದನ್ನು ಮೀರಿ ಅಂತಸ್ಸಾಕ್ಷಿ, ಧರ್ಮಸೂತ್ರ, ಮೊದಲಾದವುಗಳ ಅನ್ವಯ.
  4. ಧರ್ಮಸಮ್ಮತ ಹಕ್ಕು; ಕಾನೂನಿನ ಪ್ರಕಾರ ಅವಕಾಶವಿಲ್ಲದಿದ್ದರೂ ನೈತಿಕದೃಷ್ಟಿಯಿಂದ ಸಲ್ಲಬೇಕೆಂದು ತೋರುವ ಹಕ್ಕು.
  5. (ಬ್ರಿಟಿಷ್‍ ಪ್ರಯೋಗ) (Equity) ನಟರ ವೃತ್ತಿಸಂಘ.
  6. (ಬಹುವಚನದಲ್ಲಿ) ಗೊತ್ತಾದ (ಸ್ಥಿರ) ದರದ ಬಡ್ಡಿ ಯಾ ಲಾಭಾಂಶ ಪಡೆಯದ ಸ್ಟಾಕುಗಳು, ಷೇರುಗಳು; (ಪ್ರಿಹೆರನ್ಸ್‍ ಷೇರುಗಳಲ್ಲದ) ಸಾಮಾನ್ಯ ಷೇರುಗಳು.
  7. (ಖರ್ಚು ವೆಚ್ಚ ಕಳೆದು ಉಳಿಯುವ ಭೋಗ್ಯವಾದ ಯಾ ಆಧಾರವಾದ ಆಸ್ತಿಯ) ನಿವ್ವಳ ಬೆಲೆ.