equinox ಈ(ಎ)ಕ್ವಿನಾಕ್ಸ್‍
ನಾಮವಾಚಕ
  1. ವಿಷುವತ್ತು; ವಿಷುವತ್ಸಂಕ್ರಾಂತಿ; ಸೂರ್ಯನು ಸಮಭಾಜಕ ವೃತ್ತವನ್ನು ದಾಟುವ, ದಿವಾರಾತ್ರಿಗಳು ಭೂಮಿಯ ಎಲ್ಲ ಕಡೆಯಲ್ಲೂ ಸಮನಾಗಿರುವ ಕಾಲ (ಮಾರ್ಚ್‍ 21, ಮತ್ತು ಸೆಪ್ಟೆಂಬರ್‍ 22).
  2. (ಬಹುವಚನದಲ್ಲಿ) ವಿಷುವಂದ್ಬಿಂದಗಳು; ಖಾಗೋಳಿಕ ವಿಷುವದ್ವೃತ್ತ ಮತ್ತು ಕ್ರಾಂತಿಚಕ್ರಗಳು ಒಂದನ್ನೊಂದು ಕತ್ತರಿಸುವ ಎರಡು ಬಿಂದುಗಳು.
ಪದಗುಚ್ಛ
  1. autumn(al) equinox ತುಲಾ ಸಂಕ್ರಾಂತಿ; ತುಲಾಯನ (ಸುಮಾರು ಸೆಪ್ಟಂಬರ್‍ 22).
  2. spring (or vernal) equinox ಮೇಷ ಸಂಕ್ರಾಂತಿ; ಮೇಷಾಯನ; ವಸಂತ ಸಂಕ್ರಾಂತಿ (ಸುಮಾರು ಮಾರ್ಚಿ 21).