equilibrium ಈ(ಇ)ಕ್ವಿಲಿಬ್ರಿಅಮ್‍
ನಾಮವಾಚಕ
(ಬಹುವಚನ equilibriums ಯಾ equilibria).
  1. ಸಮತೋಲ(ನ); ಸಂತುಲನ; ಸಮತೂಕಸ್ಥಿತಿ; ಸಮಸ್ಥಿತಿ (ರೂಪಕವಾಗಿ ಸಹ).
  2. ತಾಟಸ್ಥ್ಯ; ತೀರ್ಪು ಕೊಡುವುದು ಮೊದಲಾದವುಗಳಲ್ಲಿ ತಟಸ್ಥವಾಗಿರುವುದು.
  3. ಸಮತೋಲನ:
    1. ಬೇರೆಬೇರೆ ದಿಕ್ಕುಗಳಲ್ಲಿ ವರ್ತಿಸುತ್ತಿರುವ ಬಲಗಳ ಒಟ್ಟು ಪರಿಣಾಮ ಸೊನ್ನೆ ಆಗಿರುವ ಸ್ಥಿತಿ.
    2. ಪರಾವರ್ತ ರಾಸಾಯನಿಕ ಕ್ರಿಯೆಯಲ್ಲಿ ಮುಮ್ಮುಖ ಕ್ರಿಯೆ ಮತ್ತು ಹಿಮ್ಮುಖ ಕ್ರಿಯೆಗಳ ವೇಗಗಳು ಸಮನಾಗಿರುವ ಸ್ಥಿತಿ.
  4. ಚಿತ್ತಸ್ತಿಮಿತತೆ; ಅಸಂದಿಗ್ಧತೆಯಲ್ಲಿರುವ ಯಾ ಸಮತೋಲನದಲ್ಲಿರುವ ಮಾನಸಿಕ ಸ್ಥಿತಿ.
ಪದಗುಚ್ಛ
  1. neutral equilibrium ತಟಸ್ಥ ಸಮತೋಲನ; ಅಲುಗಾಡಿಸಿದ ಮೇಲೆ (ಕಾಯವು) ಹೊಸ ಸ್ಥಾನದಲ್ಲಿ ತನ್ನ ಸಮಸ್ಥಿತಿಯನ್ನು ಕಾಯ್ದುಕೊಳ್ಳುವ ಪ್ರವೃತ್ತಿ.
  2. stable equilibrium ಸ್ಥಿರ ಸಮತೋಲನ; ಅಲುಗಾಡಿಸಿದ ಮೇಲೆ ಕಾಯವು ಪುನಃ ಮೊದಲ ಸ್ಥಿತಿಗೆ ಬರುವ ಪ್ರವೃತ್ತಿ.
  3. unstable equilibrium ಅಸ್ಥಿರ ಸಮತೋಲನ; ಅಲುಗಾಡಿಸಿದ ಮೇಲೆ ಕಾಯವು ಪುನಃ ತನ್ನ ಸಮಸ್ಥಿತಿಗೆ ಬರದೆ ಇರುವ ಪ್ರವೃತ್ತಿ.