equation ಇಕ್ವೇಷನ್‍
ನಾಮವಾಚಕ
  1. ಸಮನಾಗಿಸುವುದು; ಸರಿಹೊಂದಿಸುವುದು.
  2. (ಗಿರಾಕಿಗಳು, ಸರಬರಾಯಿ, ಮೊದಲಾದವನ್ನು) ಸರಿದೂಗಿಸುವುದು; ಸರಿಹೊಂದಿಸುವುದು; ಸರಿಗಟ್ಟುವುದು; ಸರಿಸಮಮಾಡುವುದು.
  3. ದೋಷ; ಕೊರತೆ; ನ್ಯೂನತೆ:
    1. ಯಾವುದೇ ಹೆಚ್ಚುಕಡಮೆಗಳನ್ನು ಸರಿಪಡಿಸಲು ಕೊಡಬೇಕಾದ ಯಾ ಕಳೆಯಬೇಕಾದ ಮೊತ್ತ, ಹಾಗೆ ಕೂಡಿ ಕಳೆದು ಸರಿಪಡಿಸುವುದು: personal equation ವ್ಯಕ್ತಿದೋಷ.
    2. (ಖಗೋಳ ವಿಜ್ಞಾನ) ಯಾವುದೇ ಭೌತ ವಿದ್ಯಮಾನವನ್ನು ಗಮನಿಸುವುದರಲ್ಲಾಗಬಹುದಾದ ವ್ಯಕ್ತಿಗತ ದೋಷ.
    3. (ರೂಪಕವಾಗಿ) ಯಾವುದೇ ಸಂದರ್ಭದಲ್ಲಿ ಕೈಗೊಳ್ಳುವ ತೀರ್ಮಾನದಲ್ಲಿ ವ್ಯಕ್ತಿಯ ಪೂರ್ವಾಗ್ರಹ ಮೊದಲಾದವುಗಳಿಂದ ಉದ್ಭವಿಸುವ ದೋಷ.
  4. ಸಮೀಕರಣ:
    1. (ರಸಾಯನವಿಜ್ಞಾನ) ರಾಸಾಯನಿಕ ಸೂತ್ರಗಳ ನಡುವೆ ಬಾಣದ ($\rightarrow$) ಗುರುತು, ಕೆಲವು ವೇಳೆ ಸಮಚಿಹ್ನೆಯನ್ನು ($=$) ಹಾಕಿ, ಗುರುತಿನ ಎಡಗಡೆ ಇರುವ ಕ್ರಿಯಾಕಾರಿಗಳು ಗುರುತಿನ ಬಲಗಡೆ ಇರುವ ಉತ್ಪನ್ನಗಳನ್ನು ಸೂಚಿತ ಪ್ರಮಾಣದಲ್ಲಿ ನೀಡುವುದೆಂದು ಹೇಳುವ ಸೂತ್ರ.
    2. (ಗಣಿತ) ಎರಡು ಗಣಿತೀಯ ಉಕ್ತಿಗಳು ಸಮ ಎಂದು ಸಮಚಿಹ್ನೆ ($=$)ಯಿಂದ ತೋರಿಸಿರುವ ಸೂತ್ರ.