epoch ಈ(ಎ)ಪಾಕ್‍
ನಾಮವಾಚಕ
  1. (ಚರಿತ್ರೆ, ವಿಜ್ಞಾನ, ಜೀವಮಾನ, ಮೊದಲಾದವುಗಳಲ್ಲಿ) ಯುಗ; ಪರ್ವ; ಯುಗಾರಂಭ; ಪರ್ವಾರಂಭ; ಯುಗವಿಶೇಷ: this made an epoch ಇದು ಒಂದು ಹೊಸ ಯುಗವನ್ನೇ ಆರಂಭಿಸಿತು.
  2. (ಸ್ಮರಣೀಯವಾದ) ದಿನ; ತಾರೀಖು; ಕಾಲ; ಶಕ.
  3. ವಿಶಿಷ್ಟಕಾಲ, ಯುಗ; ವಿಶೇಷ ಘಟನೆಗಳಿಂದ ಕೂಡಿದ ಚರಿತ್ರಕಾಲ ಯಾ ಜೀವಿತಕಾಲ.
  4. (ಭೂವಿಜ್ಞಾನ) ಕಾಲ; ಯುಗ; ಭೂವೈಜ್ಞಾನಿಕ ಚರಿತ್ರೆಯಲ್ಲಿ ಶಿಲಾಸ್ತರಗಳ ಶ್ರೇಣಿಗೆ ಸಂಬಂಧಿಸಿದ ಅವಧಿಯ ವಿಭಾಗ.