episode ಎಪಿಸೋಡ್‍
ನಾಮವಾಚಕ
  1. ಗ್ರೀಕ್‍ ರುದ್ರನಾಟಕಗಳಲ್ಲಿ ಎರಡು ಮೇಳಗೀತಗಳ ಮಧ್ಯೆ ಬರುವ ಭಾಗ.
  2. ಉಪಾಖ್ಯಾನ; ಉಪಕಥೆ; ಅಡ್ಡಕಥೆ; ಪ್ರಸಂಗ; ಘಟನೆ; ಕಾವ್ಯ ಮೊದಲಾದವುಗಳ ಮಧ್ಯದಲ್ಲಿ ಬರುವ ಪ್ರಾಸಂಗಿಕ ನಿರೂಪಣೆ, ಕಥೆ ಯಾ ಘಟನಾವಳಿ.
  3. (ಕಥನ, ನಿರೂಪಣೆ, ಧಾರಾವಾಹಿ ಕಾದಂಬರಿ ಯಾ ಯಾವುದೇ ಒಂದು ಸರಣಿಯ ಭಾಗವೆಂದು ಪರಿಗಣಿಸುವ) ಪ್ರಸಂಗ; ಘಟನೆ; ವಿಭಾಗ.
  4. (ಸಂಗೀತ) ಪ್ರಸಂಗ; ಪ್ರಾಸಂಗಿಕವಾಗಿ ಸೇರಿಸಿದ ಯಾ ಹೊಸ ವಿಷಯವನ್ನು ತರುವ ಕೃತಿಭಾಗ.