epiphenomenon ಎಪಿಹಿನಾಮಿನನ್‍
ನಾಮವಾಚಕ
(ಬಹುವಚನ epiphenomena).
  1. (ತತ್ತ್ವಶಾಸ್ತ್ರ) ಗೌಣ ಲಕ್ಷಣ; ಉಪಲಕ್ಷಣ; ಆನುಷಂಗಿಕ ಲಕ್ಷಣ; ಸಹವರ್ತಿ ಲಕ್ಷಣ; ಮತ್ತೊಂದರ ಕಾರಣವಾಗಲಿ ಪರಿಣಾಮವಾಗಲಿ ಆಗಿರದೆ, ಅದರ ಸಹವರ್ತಿ ಮಾತ್ರ ಆಗಿರುವ ಲಕ್ಷಣ.
  2. (ವೈದ್ಯಶಾಸ್ತ್ರ) ಉಪರೋಗ; ರೋಗವೊಂದರ ಅವಧಿಯಲ್ಲಿ ಕಾಣಿಸಿಕೊಳ್ಳುವ ಹೊಸ ತೊಡಕು ಯಾ ರೋಗ.
  3. (ಮನಶ್ಶಾಸ್ತ್ರ) ಉಪೋತ್ಪನ್ನ ಪ್ರಜ್ಞೆ; ಮಿದುಳಿನ ಚಟುವಟಿಕೆಯ ಆನುಷಂಗಿಕ ಪರಿಣಾಮ ಯಾ ಉಪಪರಿಣಾಮ ಎಂದು ಪರಿಗಣಿತವಾಗಿರುವ ಪ್ರಜ್ಞೆ.