epiphany ಇ(ಎ)ಪಿಹನಿ
ನಾಮವಾಚಕ
  1. (Epiphany) ಮೇಜೈ ಎಂಬ ಪೌರಸ್ತ್ಯ ಜ್ಞಾನಿಗಳಿಗೆ ಕ್ರಿಸ್ತನು ಕಾಣಿಸಿಕೊಂಡದ್ದು.
  2. ಸಾಕ್ಷಾತ್ಕಾರ; ದೇವರ ಪ್ರತ್ಯಕ್ಷ; ಅತಿಮಾನುಷ ವ್ಯಕ್ತಿಯ ಪ್ರತ್ಯಕ್ಷ.
  3. ಸಾಕ್ಷಾತ್ಕಾರ ದಿನ; ಕ್ರಸ್ತನು ಮೇಜೈಗಳಿಗೆ ಕಾಣಿಸಿಕೊಂಡದ್ದರ ಜ್ಞಾಪಕಾರ್ಥವಾಗಿ ಕ್ರೈಸ್ತರು ಜನವರಿ 6ನೆಯ ತಾರೀಖು ಆಚರಿಸುವ ಹಬ್ಬ.
  4. ಅಂತರ್ಬೋಧೆ; ಅಂತರ್ಜ್ಞಾನ; ಒಳಅರಿವು; ಯಾವುದಾದರೂ ಒಂದು ಸರಳ, ಸಾಮಾನ್ಯ ಘಟನೆಯ ಯಾ ನಿತ್ಯ ಜೀವನದ ಅನುಭವದ ಮೂಲಕ ಇದ್ದಕ್ಕಿದ್ದಂತೆ ಒಂದು ವಸ್ತುವಿನ (ಅಗೋಚರ) ಸತ್ಯತೆ ಯಾ ಜೀವನದ ವಾಸ್ತವತೆಯ ಬಗೆಗೆ ಮೂಡುವ ಒಳ ಅರಿವು.
  5. ಅಂತರ್ಬೋಧೆ; ಒಳ ಅರಿವು ಯಾ ಅನುಭವದ ಸಾಕ್ಷಾತ್ಕಾರ ಮಾಡಿಕೊಡುವ ಒಂದು ಸಾಹಿತ್ಯಕೃತಿ ಯಾ ಕೃತಿಯ ಒಂದು ಅರ್ಥಪೂರ್ಣ ಸನ್ನಿವೇಶ ಯಾ ಭಾಗ: the epiphany in “Oedipus”, the final tableau of the blinded old man ‘ಈಡಿಪಸ್‍’ ನಾಟಕದ ಅಂತರ್ಬೋಧಜನಕ ಸನ್ನಿವೇಶ ಅಂದರೆ ಕಣ್ಣು ಕುರುಡಾಗಿ ಬರುವ ಮುದುಕನ ಅಂತಿಮ ಮೂಕದೃಶ್ಯ.