See also 2epicurean
1epicurean ಎಪಿಕ್ಯುಅರಿ()ಅನ್‍
ಗುಣವಾಚಕ
  1. (Epicurean) ಎಪಿಕ್ಯೂರಸನ; ಕ್ರಿಸ್ತಪೂರ್ವ4ನೇ ಶತಮಾನದ ಗ್ರೀಕ್‍ ತತ್ತ್ವಜ್ಞಾನಿ ಎಪಿಕ್ಯೂರಸ್‍ನ ಸಿದ್ಧಾಂತಕ್ಕೆ ಸಂಬಂಧಪಟ್ಟ.
  2. ರಸಿಕ; ಸುಖಾಸಕ್ತ; ಸುಖಪ್ರಿಯ; ಉತ್ತಮಾಭಿರುಚಿಯುಳ್ಳ; ಸೂಕ್ಷ್ಮಾಭಿರುಚಿಯುಳ್ಳ; (ಮುಖ್ಯವಾಗಿ ನಾಜೂಕಾದ) ಇಂದ್ರಿಯ ಸುಖಾನುಭೋಗದಲ್ಲಿ ಅನುರಕ್ತನಾದ: an epicurean family ರಸಿಕ ಮನೆತನ.
  3. ರೋಚಕ; ಇಂದ್ರಿಯಗಳನ್ನು ಉದ್ರೇಕಿಸುವ ಹಾಗೂ ತೃಪ್ತಿಗೊಳಿಸುವ: epicurean dishes ನಾಲಿಗೆಯನ್ನು ತೃಪ್ತಿಗೊಳಿಸುವಂಥ ಭಕ್ಷ್ಯಗಳು.
  4. ಭೋಗಿಯ; ಭೋಗಾಸಕ್ತನ; ವಿಷಯಾಸಕ್ತನ; ಭೋಗಪ್ರವೃತ್ತಿಯ ಜೀವನ.
See also 1epicurean
2epicurean ಎಪಿಕ್ಯುಅರಿ()ಅನ್‍
ನಾಮವಾಚಕ
  1. ಎಪಿಕ್ಯೂರಿಯನ್‍; ಪರಮ ಒಳಿತು ಇರುವುದು ಸಂತೋಷದಲ್ಲಿ ಅಂದರೆ ಸದಾಚಾರದಲ್ಲಿ ಎಂದು ಬೋಧಿಸಿದ ಕ್ರಿಸ್ತಪೂರ್ವ4ನೇ ಶತಮಾನದ ಅಥೆನ್ಸಿನ ತತ್ತ್ವಜ್ಞಾನಿ ಎಪಿಕ್ಯೂರಸ್ಸನ ಅನುಯಾಯಿ.
  2. ರಸಿಕ; ಭೋಗಿ; ಭೋಗಾಸಕ್ತ; ಸುಖಲೋಲ; ಸುಖಪ್ರಿಯ; (ಮುಖ್ಯವಾಗಿ ಉನ್ನತಮಟ್ಟದ) ಇಂದ್ರಿಯ ಸುಖಾನುಭೋಗದಲ್ಲಿ ಅನುರಕ್ತನಾದವನು.