See also 2epicene
1epicene ಎಪಿಸೀನ್‍
ಗುಣವಾಚಕ
  1. (ಲ್ಯಾಟಿನ್‍ ಮತ್ತು ಗ್ರೀಕ್‍ ವ್ಯಾಕರಣ) (ಪುಂಸ್ತ್ರೀವರ್ಗಗಳಿಗೆ ಅನ್ವಯಿಸುವ) ಉಭಯಲಿಂಗಸೂಚಕ; ಲ್ಯಾಟಿನ್‍ ಪದ bos ‘ಹೋರಿ’, ‘ಎತ್ತು’ ಯಾ ‘ಹಸು’ವನ್ನು ಸೂಚಿಸುತ್ತದೆ.
  2. ಹೆಣ್ಣು, ಗಂಡು ಎರಡೂ ಜಾತಿಗಳಿಗಾಗಿ ಇರುವ ಯಾ ಎರಡೂ ಜಾತಿಗಳು ಬಳಸುವ.
  3. ಉಭಯಲಿಂಗಿ; ಪುಂಸ್ತ್ರೀಲಿಂಗಗಳೆರಡರ ವಿಶೇಷ ಲಕ್ಷಣಗಳುಳ್ಳ: fashions in clothing are becoming increasingly epicene ತೊಡಿಗೆಯ ನಮೂನೆಗಳು ಗಂಡುಹೆಣ್ಣು ಎರಡೂ ಜಾತಿಯ ಲಕ್ಷಣಗಳನ್ನು ಹೊಂದುತ್ತಿವೆ.
  4. (ವ್ಯಕ್ತಿಯ ವಿಷಯದಲ್ಲಿ) ನಪುಂಸಕ; ಲಿಂಗಲಕ್ಷಣಗಳಿಲ್ಲದಿರುವ.
  5. ನಿಸ್ಸತ್ತ್ವ; ಸತ್ತ್ವಹೀನ; ನಿಸ್ಸಾರ; ದುರ್ಬಲ; ಶಕ್ತಿಗುಂದಿದ: an epicene style of writing ಸತ್ತ್ವಹೀನ ಬರವಣಿಗೆಯ ಶೈಲಿ.
  6. ಸ್ತ್ರೈಣ; ಗಂಡುತನವಿಲ್ಲದ; ಹೆಣ್ಣಿಗತನದ: sportsman epicene beneath his tweeds ಟ್ವೀಡ್‍ ಉಡುಪಿನ ಮರೆಯಲ್ಲಿ ಹೆಣ್ಣಿಗನಾಗಿರುವ ಆಟಗಾರ.
See also 1epicene
2epicene ಎಪಿಸೀನ್‍
ನಾಮವಾಚಕ
  1. ಉಭಯಲಿಂಗಿ; ಹೆಣ್ಣುಗಂಡು ಎರಡೂ ಜಾತಿಗಳ ಲಕ್ಷಣಗಳುಳ್ಳ ವ್ಯಕ್ತಿ.
  2. ಅಲಿಂಗಿ; ನಿರ್ಲಿಂಗಿ; ನಪುಂಸಕ; ಲಿಂಗ ಲಕ್ಷಣಗಳಿಲ್ಲದಿರುವ ವ್ಯಕ್ತಿ.
  3. ಹೆಣ್ಣಿಗ; ಗಂಡುತನವಿಲ್ಲದ ವ್ಯಕ್ತಿ.