ephemeral ಇ(ಎ)ಹೀ(ಹೆ)ಮರಲ್‍
ಗುಣವಾಚಕ
  1. (ರೋಗಗಳ ವಿಷಯದಲ್ಲಿ) ದಿನಾವಧಿ; ಒಂದು ದಿನ ಮಾತ್ರವಿರುವ.
  2. (ಕೀಟ, ಹೂವು, ಮೊದಲಾದವುಗಳ ವಿಷಯದಲ್ಲಿ) ದಿನಾಯುಷ್ಯದ; ದಿನಬಾಳ್ವೆಯ; ಒಂದು ದಿನ ಯಾ ಕೆಲವು ದಿನ ಮಾತ್ರ ಜೀವಿಸಿರುವ.
  3. ಕ್ಷಣಿಕ; ಅಲ್ಪಕಾಲಿಕ; ಅಲ್ಪಾಯುಸ್ಸಿನ; ಕ್ಷಣಭಂಗುರ; ನಶ್ವರ; ಕಿಂಚಿತ್‍ಕಾಲದ; ಕಾಯಂ ಅಲ್ಲದ: the ephemeral joys of childhood ಬಾಲ್ಯದ ಕ್ಷಣಿಕ ಸಂತೋಷಗಳು.