enwrap ಇ(ಎ)ನ್‍ರ್ಯಾಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ enwrapped, ವರ್ತಮಾನ ಕೃದಂತ enwrapping).
  1. ಸುತ್ತು; ಕವಿ; ಹುದುಗಿಸು; ಮುಚ್ಚು; ಆವರಿಸು: a house enwrapped in flowers ಹೂಗಳಿಂದ ಮುಚ್ಚಲ್ಪಟ್ಟ ಮನೆ.
  2. (ರೂಪಕವಾಗಿ) (ನಿದ್ರೆ, ಧ್ಯಾನ ಯಾ ಗಾಢಾಲೋಚನೆಯಲ್ಲಿ) ಮುಳುಗಿಸು; ತಲ್ಲೀನಗೊಳಿಸು; ತಲ್ಲೀನವಾಗಿಮಾಡು; ಮಗ್ನಮಾಡು: enwrapped in fond dreams of a bright future ಉಜ್ಜ್ವಲ ಭವಿಷ್ಯದ ಹೊಂಗನಸುಗಳಲ್ಲಿ ಮುಳುಗಿಹೋಗಿ.