environ ಇನ್‍ವೈಅರನ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಗಳ ಯಾ ವಸ್ತುಗಳ ವಿಷಯದಲ್ಲಿ) ಸುತ್ತುಗಟ್ಟು; ಸುತ್ತುವರಿ; ಬಳಸು; ಬಳಸಿ ನಿಲ್ಲು; ಪರಿವೇಷ್ಟಿಸು: a city environed by extensive plains ವಿಸ್ತಾರವಾದ ಬಯಲುಗಳಿಂದ ಸುತ್ತುಗಟ್ಟಲ್ಪಟ್ಟ ನಗರ.
  2. (ವ್ಯಕ್ತಿ, ಸ್ಥಳ, ಮೊದಲಾದವನ್ನು ಸೈನಿಕರು, ಸೇವಕರು, ಮೊದಲಾದವರು ಶತ್ರುಭಾವದಿಂದ ಯಾ ರಕ್ಷಣೆಗೋಸ್ಕರ) ಸುತ್ತುವರಿ; ಮುತ್ತು; ಮುಸುಕು; ಕವಿ; ಆವರಿಸು: ladies in waiting environed the queen ಪರಿಚಾರಿಕೆಯರು ರಾಣಿಯನ್ನು ಸುತ್ತುವರಿದರು.
  3. (ವ್ಯಕ್ತಿಯನ್ನು, ವಸ್ತುವನ್ನು ಇತರರಿಂದ) ಸುತ್ತುಗಟ್ಟು; ಸುತ್ತುವರಿ; ಆವರಿಸು; ಬಳಸು: made light of the dangers that environed him ತನ್ನನ್ನು ಸುತ್ತುವರಿದ ಅಪಾಯಗಳನ್ನು ಹಗುರವಾಗಿ ಕಂಡನು.