envelope ಎ(ಆ)ನ್ವಲೋಪ್‍
ನಾಮವಾಚಕ
  1. ಹೊದಿಕೆ; ಆವರಣ; ಕವರು; ಸುತ್ತುವ ಪದಾರ್ಥ (ರೂಪಕವಾಗಿ ಸಹ).
  2. (ಕಾಗದದ, ಪತ್ರದ) ಲಕೋಟೆ; ಲಿಫಾಫೆ; ಕವರು.
  3. (ಆಕಾಶಬುಟ್ಟಿ ಯಾ ವಾಯುನೌಕೆಯ) ಅನಿಲದ ಚೀಲ, ಅನಿಲಕೋಶ; ಅನಿಲವನ್ನು ಹೊಂದಿರುವ ಚೀಲ, ಕೋಶ.
  4. ಹೊರಹೊದಿಕೆ; ನಿರ್ವಾತ ಕೊಳವೆಯ ಹೊರಕೊಳವೆ.
  5. (ವಿದ್ಯುದ್ವಿಜ್ಞಾನ) ಆವರಣ; ಮಾಡ್ಯುಲೀಕರಿಸಿದ ಅಲೆಯ ಶಿಖರಗಳನ್ನೆಲ್ಲ ಸೇರಿಸುವ ವಕ್ರ.
  6. ಆವರಣ:
    1. (ಸಸ್ಯವಿಜ್ಞಾನ) ಪುಷ್ಪಪಾತ್ರ ಯಾ ದಳವಲಯ ಯಾ ಅವೆರಡೂ.
    2. (ಜ್ಯಾಮಿತಿ) ಒಂದೇ ವರ್ಗಕ್ಕೆ ಸೇರಿದ ಹಲವಾರು ವಕ್ರಗಳಿಗೆ ಸ್ಪರ್ಶರೇಖೆಯಾಗಿರುವ ವಕ್ರ ಯಾ ಒಂದೇ ವರ್ಗಕ್ಕೆ ಸೇರಿದ ಹಲವಾರು ತಲಗಳಿಗೆ ಸ್ಪರ್ಶತಲವಾಗಿರುವ ತಲ.