envelop ಇನ್ವೆಲಪ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ, ವಸ್ತು, ವಿಷಯ, ಮೊದಲಾದವನ್ನು ಹೊದಿಕೆ, ಉರಿ, ಮೋಡ, ರಹಸ್ಯ, ಮೊದಲಾದವುಗಳಲ್ಲಿ) ಸುತ್ತು; ಮುಚ್ಚು; ಹೊದಿಸು; ಮರೆಮಾಡು; ಮರೆಸು; ಸುತ್ತುವರಿ; ಆವರಿಸು; ಕವಿಸು; ಆಚ್ಛಾದಿಸು: enveloped him in a white robe ಅವನಿಗೆ ಬಿಳಿಯ ಉಡುಪು ಹೊದಿಸಿದನು.
  2. (ಉಡುಪು ಮೊದಲಾದವುಗಳ ವಿಷಯದಲ್ಲಿಎಲ್ಲಾ ಭಾಗಗಳಲ್ಲಿಯೂ) ಬಿಗಿಯಾಗಿ ಆವರಿಸಿರು; ಸುತ್ತುವರಿದಿರು; ಗುತ್ತನಾಗಿರು.
  3. (ಸೈನ್ಯ) (ಶತ್ರುವನ್ನು) ಸುತ್ತುಗಟ್ಟು; ಮುತ್ತು; ಸುತ್ತುವರಿ: our troops enveloped the enemy ನಮ್ಮ ಪಡೆಗಳು ಶತ್ರುವನ್ನು ಸುತ್ತುಗಟ್ಟಿದುವು.