enunciation ಇನನ್ಸಿಏಷನ್‍
ನಾಮವಾಚಕ
  1. (ನಿಯಮದ, ತತ್ತ್ವದ) ಖಚಿತ ನಿರೂಪಣೆ; ನಿರ್ದಿಷ್ಟರೂಪದ ಹೇಳಿಕೆ.
  2. ಬಹಿರಂಗ ಘೋಷಣೆ; ಸಾರುವಿಕೆ: a national penchant for enunciation of idealistic goals ಆದರ್ಶ ರೀತಿಯ ಧ್ಯೇಯಗಳನ್ನು ಘೋಷಿಸುವ ರಾಷ್ಟ್ರೀಯ ಪ್ರವೃತ್ತಿ.
  3. ಉಚ್ಚಾರಣೆ; ಉಚ್ಚಾರದ ರೀತಿ: detected in his enunciation some slight influence of the brandy ಅವನ ಉಚ್ಚಾರಣೆಯಲ್ಲಿ ಬ್ರಾಂದಿಯ ತುಸು ಪ್ರಭಾವವನ್ನು ಪತ್ತೆಹಚ್ಚಿದೆ.
  4. ನಿರ್ವಾಚನ; ಪ್ರಕಟಣೆ; ಘೋಷಣೆ; ಅಭಿವ್ಯಕ್ತಿ; ವ್ಯಕ್ತಪಡಿಸುವಿಕೆ: contained an enunciation of all the traditional freedoms ಎಲ್ಲ ಸಾಂಪ್ರದಾಯಿಕ ಸ್ವಾತಂತ್ರ್ಯಗಳ ಘೋಷಣೆಯನ್ನೂ ಒಳಗೊಂಡಿತ್ತು.