enunciate ಇನನ್ಸಿ(ನ್ಸಿ)ಏಟ್‍
ಸಕರ್ಮಕ ಕ್ರಿಯಾಪದ
  1. (ಪ್ರಮೇಯವನ್ನು, ಸಿದ್ಧಾಂತವನ್ನು) ಖಚಿತವಾಗಿ ನಿರೂಪಿಸು; ನಿಷ್ಕೃಷ್ಟವಾಗಿ ಪ್ರತಿಪಾದಿಸು; ನಿರ್ದಿಷ್ಟವಾಗಿ ಹೇಳು: enunciated a materialistic theory of the universe ವಿಶ್ವಸ್ವರೂಪ ಕುರಿತ ಭೌತವಾದವನ್ನು ಪ್ರತಿಪಾದಿಸಿದನು.
  2. ಸಾರು; ಸಾರಿಹೇಳು; ಘೋಷಿಸು: enunciated the principles to be followed by his administration ತನ್ನ ಆಡಳಿತ ಅನುಸರಿಸುವ ತತ್ತ್ವಗಳನ್ನು ಘೋಷಿಸಿದನು.
  3. (ಮಾತುಗಳನ್ನು) ಉಚ್ಚರಿಸು; ನುಡಿ: he enunciates his words distinctly ಅವನು ಮಾತುಗಳನ್ನು ಸ್ಪಷ್ಟವಾಗಿ ಉಚ್ಚರಿಸುತ್ತಾನೆ.