enumerate ಇನ್ಯೂಮರೇಟ್‍
ಸಕರ್ಮಕ ಕ್ರಿಯಾಪದ
  1. ಎಣಿಸು; ಎಣಿಕೆ ಮಾಡು: more birds than I could enumerate ನನ್ನ ಎಣಿಕೆಗೆ ಮೀರಿದಷ್ಟು ಹಕ್ಕಿಗಳು.
  2. (ಬಾಬುಗಳನ್ನು) ನಮೂದಿಸು; ಪಟ್ಟಿ ಮಾಡು; ಒಂದೊಂದಾಗಿ ಹೇಳು: enumerated the advantages of his new position ಅವನ ಹೊಸ ಹುದ್ದೆಯ ಸೌಕರ್ಯಗಳನ್ನು ಒಂದೊಂದಾಗಿ ಹೇಳಿದನು.